ನವದೆಹಲಿ:   ಆರ್‌ಜೆ ಆಸ್ಪತ್ರೆ, ಕಾಲೇಜಿನ ವಿದ್ಯಾರ್ಥಿಯ ಕೊಲೆಯನ್ನು ಖಂಡಿಸಿ ವಿದ್ಯಾರ್ಥಿ ಸಂಘಟನೆ ಕರೆ ನೀಡಿದ್ದ ನಬನ್ನ ಅಭಿಯಾನದ ಹಿನ್ನೆಲೆಯಲ್ಲಿ ಕೋಲ್ಕತ್ತಾ ಮತ್ತು ಹೌರಾದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದವು.ಬೆಳಗ್ಗೆಯಿಂದಲೇ ಅಭಿಯಾನವನ್ನು ತಡೆಯಲು ರಾಜ್ಯ ಮತ್ತು ಕೋಲ್ಕತ್ತಾ ಪೊಲೀಸರು ಸಜ್ಜಾಗಿದ್ದರು. ಆದರೆ ವಿದ್ಯಾರ್ಥಿ ಸಂಘಟನೆ ಅಭಿಯಾನದಿಂದ ಹಿಂದೆ ಸರಿಯಲಿಲ್ಲ. ವಿವಿಧ ದಿಕ್ಕುಗಳಿಂದ ಮೆರವಣಿಗೆ ನಡೆಸಿದರು.

ನಬನ್ನ ಅಭಿಯಾನದ ಹೆಸರಿನಲ್ಲಿ, ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸಿ ಮುಂದೆ ಸಾಗಿದರು. ನಬನ್ನ ಅಭಿಯಾನವನ್ನು ತಡೆಯಲು ರಾಜ್ಯ ಆಡಳಿತ ಸುಮಾರು 19 ಕಡೆ ಪೊಲೀಸರನ್ನು ನಿಯೋಜಿಸಿತ್ತು.ಅಭಿಯಾನವನ್ನು ತಡೆಯಲು ಪ್ರತಿಭಟನಾಕಾರರ ಮೇಲೆ ಜಲಫಿರಂಗಿ ಪ್ರಯೋಗಿಸಿದರು. ಆಶ್ರವಾಯು ಸಹ ಪ್ರಯೋಗಿಸಿದರೂ ವಿದ್ಯಾರ್ಥಿಗಳು ಹಿಂದೆ ಸರಿಯಲಿಲ್ಲ.

ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟದ ಘಟನೆಯೂ ನಡೆದಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದರು. ಮಹಿಳಾ ಪ್ರತಿಭಟನಾಕಾರರ ಒಂದು ಗುಂಪು ಬಹುತೇಕ ನಬನ್ನ ಚೌಕವನ್ನು ತಲುಪಿತು. ಆದರೆ ಜಲಫಿರಂಗಿಗಳು ಮತ್ತು ಅಶ್ರುವಾಯು ಶೆಲ್‌ ಗಳೊಂದಿಗೆ ಸಜ್ಜಾಗಿರುವ ಪೊಲೀಸರು ಅವರನ್ನು ತಡೆದರು.