ಮಧ್ಯಪ್ರದೇಶ: ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರದಲ್ಲಿ ವಿಭಿನ್ನ ಫಲಿತಾಂಶಗಳು ಕಂಡುಬರುತ್ತಿವೆ. ರಾಜಕೀಯ ಪಕ್ಷಗಳ ಮೇಲೆ ಇಲ್ಲಿನ ಮತದಾರರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಇಂದೋರ್‌ನಲ್ಲಿ ನೋಟಾಕ್ಕೆ ಬಂದ ಮತಗಳ ಸಂಖ್ಯೆ 1,27,277 ದಾಟಿದೆ.
ಚುನಾವಣಾ ಆಯೋಗವು ಡಿಸೆಂಬರ್ 2013 ರ ವಿಧಾನಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳು – ಇವಿಎಂಗಳಲ್ಲಿ ನೋಟಾ – ‘ಮೇಲಿನ ಯಾವುದೂ ಅಲ್ಲ’ ಆಯ್ಕೆಯನ್ನು ಒದಗಿಸಿತ್ತು.
ಪಕ್ಷ ರಾಜಕಾರಣದ ಅಂಕಿಅಂಶಗಳನ್ನು ಗಮನಿಸಿದರೆ ಇಲ್ಲಿ ಬಿಜೆಪಿಯ ಶಂಕರ್ ಲಾಲ್ವಾನಿ ಮುನ್ನಡೆಯಲ್ಲಿದ್ದಾರೆ. ಮಧ್ಯಾಹ್ನವರೆಗೆ ಶಂಕರ್ ಪರ 7,74,449 ಮತಗಳು ಚಲಾವಣೆಯಾಗಿವೆ. ಬಹುಜನ ಸಮಾಜ ಪಕ್ಷದ ಸಂಜಯ್ 33,921 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಅಖಿಲ ಭಾರತೀಯ ಪರಿವಾರ ಪಕ್ಷದ ಪವನ್ ಕುಮಾರ್ 10,059 ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

