ಆಂಧ್ರಪ್ರದೇಶ: ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವದ ನಿಮಿತ್ತ ಇಂದು ಉತ್ತರಾಧನೆ ನಡೆಯಿತು. ಶ್ರೀಗಳು, ಅರ್ಚಕರು ಬಣ್ಣದೋಕುಳಿಯಲ್ಲಿ ಮಿಂದೆದ್ದು ವಸಂತೋತ್ಸವ ಆಚರಿಸಿದರು. ಬಳಿಕ ಮಹಾರಥೋತ್ಸವಕ್ಕೆ ಶ್ರೀಗಳು ಚಾಲನೆ ನೀಡಿ ಭಕ್ತರಿಗೆ ಆಶೀರ್ವಚನ ನೀಡಿದರು.
4 1

ಇಂದು ಉತ್ತರಾಧನೆ ಹಿನ್ನೆಲೆ ರಾಯರು ಪ್ರಹ್ಲಾದ್ ರಾಜರ ಉತ್ಸವ ಮೂರ್ತಿ ರೂಪದಿಂದ ಹೊರ ಪ್ರಕಾರದಲ್ಲಿ ಬಂದು ಭಕ್ತರಿಗೆ ರಾಜ ಬೀದಿಯಲ್ಲಿ ದರ್ಶನ ಕೊಡುತ್ತಾರೆ ಎನ್ನುವ ಪ್ರತೀತಿಯಿದೆ. ಹೀಗಾಗಿ ಇದರ ಭಾಗವಾಗಿ ಗುರುರಾಯರನ್ನ ಪ್ರಹ್ಲಾದ್ ರಾಜರ ರೂಪದಲ್ಲಿ ಸಂಸ್ಕೃತ ಪಾಠಶಾಲೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.

ಇದೇ ವೇಳೆ ಶ್ರೀಗಳು ಭಕ್ತರಿಗೆ ಆಶಿರ್ವಚನ ಮಾಡಿ, ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರೊ ದೌರ್ಜನ್ಯವನ್ನ ಶ್ರೀಗಳು ಖಂಡಿಸಿ, ವಿಶ್ವದಲ್ಲಿ ಶಾಂತಿ ನೆಲೆಸಲಿ. ಭಾರತ ವಿಶ್ವ ಗುರುವಾಗಲಿ ಅಂತ ಹಾರೈಸಿದರು.

ಇನ್ನು ಸಂಸದ ಹಾಗೂ ಮೈಸೂರು ರಾಜ ಮನೆತನದ ಯಧುವೀರ್ ಅವರು ಇಂದು ರಾಯರ ಆರಾಧನಾ ಮಹೋತ್ಸವದಲ್ಲಿ ಭಾಗಿಯಾದರು. ಇದೇ ವೇಳೆ ಶ್ರೀ ಮಠದ ಅತ್ಯುನ್ನತ ಪ್ರಶಸ್ತಿಯಾದ ರಾಘವೇಂದ್ರ ಅನುಗ್ರಹ ಪ್ರಶಸ್ತಿಯನ್ನ ಸುಬುಧೇಂದ್ರ ತೀರ್ಥರು ಯಧುವೀರ್ ಅವರಿಗೆ ನೀಡಿ ಗೌರವಿಸಿದರು.