ದೆಹಲಿ: ದೇಶದ ಮಾಜಿ ಪ್ರಧಾನಿ, ಅರ್ಥಶಾಸ್ಜ್ರಜ್ಞ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಡಾ. ಮನಮೋಹನ್ ಸಿಂಗ್ ಅವರು 2024 ರ ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನಕ್ಕೂ ಮುನ್ನ ಮತದಾರರಲ್ಲಿ ವಿಶೇಷ ಮನವಿ ಮಾಡಿದ್ದಾರೆ.
ಮತ್ತೊಂದೆಡೆ, ಅವರು ಪ್ರಧಾನಿ ನರೇಂದ್ರ ಮೋದಿ ಬಳಸುವ ಭಾಷೆ ಮತ್ತು ನೀತಿಗಳನ್ನು ತೀವ್ರವಾಗಿ ಟೀಕಿಸಿದ್ದಾರೆ.
ಈ ಬಗ್ಗೆ ಇಂದು (30 ಮೇ 2024) ಪತ್ರವೊಂದನ್ನು ಬರೆದಿರುವ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು, ‘ನನ್ನ ಪ್ರೀತಿಯ ಸಹ ನಾಗರಿಕರೇ, ಭಾರತವು ನಿರ್ಣಾಯಕ ಘಟ್ಟದಲ್ಲಿ ನಿಂತಿದೆ. ಅಂತಿಮ ಸುತ್ತಿನ ಮತದಾನದಲ್ಲಿ, ನಿರಂಕುಶ ಆಡಳಿತವನ್ನು ಕೊನೆಗೊಳಿಸುವ ಮೂಲಕ ನಮ್ಮ ಪ್ರಜಾಪ್ರಭುತ್ವ ಮತ್ತು ನಮ್ಮ ಸಂವಿಧಾನವನ್ನು ರಕ್ಷಿಸಲು ನಮಗೆ ಕೊನೆಯ ಅವಕಾಶವಿದೆ. ಪಂಜಾಬ್ ಮತ್ತು ಪಂಜಾಬಿಗಳು ಯೋಧರು. ನಾವು ನಮ್ಮ ತ್ಯಾಗದ ಮನೋಭಾವಕ್ಕೆ ಹೆಸರುವಾಸಿಯಾಗಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಸಾಮರಸ್ಯ, ಸಹಬಾಳ್ವೆ ಮತ್ತು ಸಹಜ ನಂಬಿಕೆ ನಮ್ಮ ಮಹಾನ್ ರಾಷ್ಟ್ರವನ್ನು ರಕ್ಷಿಸುತ್ತದೆ’ ಎಂದು ಹೇಳಿದ್ದಾರೆ.
ತಮ್ಮ ಪತ್ರದಲ್ಲಿ ಡಾ. ಮನಮೋಹನ್ ಸಿಂಗ್ ಅವರು, ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಸರ್ಕಾರವು ಪಂಜಾಬ್ ಮತ್ತು ಪಂಜಾಬಿ ಜನರನ್ನು ಅನ್ನು ದೂಷಿಸುತ್ತಲೇ ಬಂದಿದ್ದಾರೆ. ಪಂಜಾಬ್‌ನ 750 ರೈತರು ಹುತಾತ್ಮರಾಗಿದ್ದಾರೆ. ರೈತರು ದೆಹಲಿಯ ಗಡಿಯಲ್ಲಿ ತಿಂಗಳುಗಟ್ಟಲೆ ನಿರಂತರವಾಗಿ ಕಾಯುತ್ತಿದ್ದರು. ಸರ್ಕಾರ ಅವರ ಮೇಲೆ ದಾಳಿ ನಡೆಸಿತು. ಸಂಸತ್ತಿನಲ್ಲಿ ರೈತರನ್ನು ಚಳವಳಿಗಾರರು ಮತ್ತು ಪರಜೀವಿಗಳು ಎಂದು ಕರೆಯಲಾಯಿತು ಎಂದು ಉಲ್ಲೇಖಿಸಿದ್ದಾರೆ.
ಅಲ್ಲದೆ ಕಳೆದ 10 ವರ್ಷಗಳಲ್ಲಿ ದೇಶದ ಆರ್ಥಿಕತೆ ಊಹೆಗೂ ನಿಲುಕದ ಪ್ರಕ್ಷುಬ್ಧತೆಯನ್ನು ಕಂಡಿದೆ ಎಂದು ಬರೆದುಕೊಂಡಿದ್ದಲ್ಲದೇ, ನೋಟು ಅಮಾನ್ಯೀಕರಣ, ಅವೈಜ್ಞಾನಿಕ ಜಿಎಸ್‌ಟಿಯ ಅನುಷ್ಠಾನ, ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ನಿರ್ಧಾರ ದಯನೀಯ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರಾಸರಿ ಜಿಡಿಪಿ ಬೆಳವಣಿಗೆ ದರ ಶೇ.6ಕ್ಕಿಂತ ಕಡಿಮೆಯಿದ್ದರೆ, ಕಾಂಗ್ರೆಸ್-ಯುಪಿಎ ಅವಧಿಯಲ್ಲಿ ಶೇ.8ರಷ್ಟಿತ್ತು ಎಂದು ಹೇಳಿದ್ದಾರೆ.

