ಭಾರತದ ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿ ಹಿಂದೆಂದೂ ಕಂಡಿರದ ಅತಿದೊಡ್ಡ ಐಪಿಒ (Initial Public Offering) ಗೆ ಮಣಿಪಾಲ್ ಹಾಸ್ಪಿಟಲ್ಸ್ ಸಜ್ಜಾಗಿದೆ. ಸಿಂಗಾಪುರದ ಹೂಡಿಕೆ ಸಂಸ್ಥೆ ಟೆಮಾಸೆಕ್ ಮತ್ತು ಡಾ. ರಂಜನ್ ಪೈ ಬೆಂಬಲಿತ ಮಣಿಪಾಲ್ ಹಾಸ್ಪಿಟಲ್ಸ್, ಬಿಲಿಯನ್ ಡಾಲರ್‌ಗೂ ಅಧಿಕ ಮೊತ್ತದ ಐಪಿಒಗಾಗಿ ಸೆಬಿಗೆ (Sebi) ಡ್ರಾಫ್ಟ್ ಪೇಪರ್‌ಗಳನ್ನು ಸಲ್ಲಿಸಿದೆ.
ಈ ಐಪಿಒ ಮೂಲಕ ಸಂಸ್ಥೆಯು 8,000 ಕೋಟಿ ರೂಪಾಯಿಗಳ ಹೊಸ ಷೇರುಗಳನ್ನು ಮತ್ತು ಅಸ್ತಿತ್ವದಲ್ಲಿರುವ ಷೇರುದಾರರಿಂದ 43.23 ಮಿಲಿಯನ್ ಷೇರುಗಳನ್ನು ಮಾರಾಟ ಮಾಡಲು ಯೋಜಿಸಿದೆ. ಇದು ಭಾರತದ ಆರೋಗ್ಯ ಕ್ಷೇತ್ರದ ಇತಿಹಾಸದಲ್ಲೇ ಅತಿದೊಡ್ಡ ಐಪಿಒ ಎಂದು ಉದ್ಯಮದ ಮೂಲಗಳು ತಿಳಿಸಿವೆ.

