ತಿರುವನಂತಪುರಂ: ನಗರದ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆಂದು ತೆರಳಿದ್ದ ವ್ಯಕ್ತಿ ಲಿಫ್ಟ್‌ನಲ್ಲೇ 2 ದಿನ ಸಿಲುಕಿಕೊಂಡಿರುವ ಘಟನೆ ನಡೆದಿದೆ. ಎಷ್ಟೇ ಬಾರಿ ಕಿರುಚಿದರೂ ಅವರ ಕೂಗು ಹೊರಗಿನವರಿಗೆ ಗೊತ್ತಾಗಲೇ ಇಲ್ಲ. ವಾರಾಂತ್ಯವಾಗಿದ್ದರಿಂದ ಶನಿವಾರ ಮತ್ತು ಭಾನುವಾರ ಬಹುತೇಕ ಸಿಬ್ಬಂದಿ ರಜೆಯಲ್ಲಿದ್ದುದರಿಂದ ಅವರು ಲಿಫ್ಟ್ನಲ್ಲಿ ಸಿಲುಕಿರುವ ಸಂಗತಿ ಆಸ್ಪತ್ರೆಯವರಿಗೂ ತಿಳಿಯಲಿಲ್ಲ.2 ದಿನ ಹಸಿವಿನಲ್ಲೇ ಲಿಫ್ಟ್ನೊಳಗೆ ಒದ್ದಾಡುತ್ತಿದ್ದ ಆ ವ್ಯಕ್ತಿಗೆ ಸೋಮವಾರ ಬೆಳಗ್ಗೆ ಕೊನೆಗೂ ಲಿಫ್ಟ್ನಿಂದ ಬಿಡುಗಡೆ ಸಿಕ್ಕಿದೆ.
ಸೋಮವಾರ ಬೆಳಗ್ಗೆ ನಿತ್ಯದ ಕೆಲಸಕ್ಕಾಗಿ ಬಂದ ಸಿಬ್ಬಂದಿಗೆ ಲಿಫ್ಟ್ನೊಳಗೆ ಯಾರೋ ಸಿಲುಕಿರುವುದು ಗೊತ್ತಾಗಿದೆ. ನಂತರ ಲಿಫ್ಟ್‌ನ ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

