ಶಬರಿಮಲೆ: ಮಕರ ಜ್ಯೋತಿ ಯಾತ್ರೆಗಾಗಿ ಶಬರಿಮಲೆ ದೇವಾಲಯವನ್ನು ಮಂಗಳವಾರ ಸಂಜೆ 5 ಗಂಟೆಗೆ ಮೇಲ್ಶಾಂತಿ ಇ.ಟಿ. ಪ್ರಸಾದ್ ಅವರು ಮುಖ್ಯ ಪೀಠಾಧಿಪತಿ ಮಹೇಶ್ ಮೋಹನರ್ ಅವರ ನೇತೃತ್ವದಲ್ಲಿ ದೇವಾಲಯವನ್ನು ತೆರೆಯಲಾಯಿತು.
ಆ ಬಳಿಕ ಮೇಲ್ಶಾಂತಿಯಿಂದ ಶಬರೀಷನ ವಿಗ್ರಹದ ಮೇಲೆ ಕೆತ್ತಲಾದ ವಿಭೂತಿ ಮತ್ತು ಕೀಲಿಯನ್ನು ಸ್ವೀಕರಿಸಿದರು. ಅಯ್ಯಪ್ಪ ಭಕ್ತರು ಹದಿನೆಂಟನೇ ಮೆಟ್ಟಿಲು ಹತ್ತಿ ದರ್ಶನ ಪಡೆದರು. ಶಬರಿಮಲೆ ಕಾರ್ಯನಿರ್ವಾಹಕ ಅಧಿಕಾರಿ ಒ.ಜಿ. ಬಿಜು, ಆಡಳಿತ ಅಧಿಕಾರಿ ಎಸ್. ಶ್ರೀನಿವಾಸ್ ಮತ್ತು ಇತರರು ದರ್ಶನಕ್ಕೆ ಹಾಜರಿದ್ದರು.
ಮಂಡಲ ಮಹೋತ್ಸವ ಮುಗಿದ ಅನಂತರ ಕಳೆದ ಡಿ. 27ರಂದು ದೇವಾಲಯ ಮುಚ್ಚಲಾಗಿತ್ತು. ಜ. 14 ರಂದು ಮಕರ ಜ್ಯೋತಿ. ಜ. 19ರಂದು ರಾತ್ರಿ 11ಕ್ಕೆ ಭಕ್ತರು ದರ್ಶನ ಪಡೆಯಬಹುದು. ಜ. 20ರಂದು ಬೆಳಗ್ಗೆ 6.30 ಕ್ಕೆ ದೇವಾಲಯವನ್ನು ಮುಚ್ಚಲಾಗುತ್ತದೆ.

