ತಮಿಳುನಾಡು: ಗುಂಡ್ಲುಪೇಟೆ ಗಡಿಗೆ ಹೊಂದಿಕೊಂಡಂತಿರುವ ತಮಿಳುನಾಡಿನ ಮಸನಗುಡಿಯಲ್ಲಿ ಈ ದೃಶ್ಯ ಕಂಡುಬಂದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ತಮಿಳುನಾಡಿನ ಮಸನಗುಡಿ ಚೆಕ್ಪೋಸ್ಟ್ ಬಳಿ ರಸ್ತೆ ದಾಟುತ್ತಿದ್ದ ಉದ್ದನೆಯ ನೀಲ ದಂತದ ಒಂಟಿಸಲಗ ರಸ್ತೆಬದಿಯಲ್ಲಿನ ಸೂಚನಾ ಫಲಕದಲ್ಲಿ ಚಿತ್ರಿಸಿರುವ ಆನೆಯನ್ನ ನೋಡಿ ಥಟ್ ಅಂತ ಗಾಬರಿಗೊಳಗಾಗಿದೆ,
ಒಂಟಿ ಸಲಗವು ಬೆಚ್ಚಿ ಚಿತ್ರದ ಕಡೆ ಮುಖಮಾಡಿ ನಿಂತಂತಹ ದೃಶ್ಯವನ್ನ ಕಾರಿನಲ್ಲಿದ್ದವರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಚಿತ್ರದಲ್ಲಿನ ಆನೆಯನ್ನ ಕಂಡು ಬೆದರಿದ ಒಂಟಿ ಸಲಗದ ದೃಶ್ಯ ಬಾರಿ ವೈರಲ್ ಆಗಿದೆ.

