ಉತ್ತರಪ್ರದೇಶ: ಉತ್ತರ ಪ್ರದೇಶದ ಡಿಜಿಟಲ್ ಮಿಡಿಯಾ ಪಾಲಿಸಿ ಅನ್ವಯ ದೇಶ ವಿರೋಧಿ ವಿಡಿಯೋ ಹೇಳಿಕೆ ಹಾಗೂ ಪೋಸ್ಟ್​ಗಳನ್ನು ಮಾಡಿದವರಿಗೆ ಕಠಿಣ ಅಂದ್ರೆ ಜೀವಾವಧಿ ಶಿಕ್ಷೆ ಹಾಗೂ ರಾಷ್ಟ್ರೀಯತೆಯನ್ನು ಉತ್ತೇಜಿಸುವವರಿಗೆ ದೊಡ್ಡ ಆಫರ್ ಗಳನ್ನು ಯೋಗಿ ಆದಿತ್ಯನಾಥ್‌ ಸರ್ಕಾರ ಜನರಿಗೆ ನೀಡಿದೆ.

ಉತ್ತರ ಪ್ರದೇಶದ ಹೊಸ ನಿಯಮದನ್ವಯ, ಸೋಷಿಯಲ್ ಮಿಡಿಯಾಗಳಾದ ಎಕ್ಸ್, ಫೇಸ್​ಬುಕ್, ಯೂಟ್ಯೂಬ್, ವಾಟ್ಸಾಪ್ ಈ ತರಹದ ಸಾಮಾಜಿಕ ಜಾಲತಾಣಗಳಲ್ಲಿ ದೇಶ ವಿರೋಧಿ ಅನಿಸುವ ಪೋಸ್ಟ್​ಗಳನ್ನಾಗಲಿ, ವಿಡಿಯೋಗಳನ್ನಾಗಲಿ ಹೇಳಿಕೆಗಳನ್ನಾಗಲಿ ನೀಡಿದವರಿಗೆ ದಂಡದ ಜೊತೆ ಜೊತೆಗೆ ಮೂರು ವರ್ಷದಿಂದ ಜೀವಾವಧಿ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಲಾಗಿದೆ.

ಈ ರೀತಿಯ ಚಟುವಟಿಕೆಗಳನ್ನು ಐಟಿ ಆ್ಯಕ್ಟ್​ ಸೆಕ್ಷನ್ 66E ಮತ್ತು 66F ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಹೇಳಲಾಗಿದೆ. ಯುಪಿ ಸರ್ಕಾರ ತಂದಿರು ಹೊಸ ನೀತಿ ನಿಯಮಗಳಲ್ಲಿ ರಾಷ್ಟ್ರೀಯತೆಯನ್ನು ಉತ್ತೇಜಿಸುವ ಖಾತೆ ಹೊಂದಿದವರಿಗೆ ಭರ್ಜರಿ ಬಹುಮಾನ ಘೋಷಿಸಿದೆ.

ಎಕ್ಸ್, ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಮ್​ಗಳಲ್ಲಿ ರಾಷ್ಟ್ರೀಯತೆಯ ಕುರಿತು ಧನಾತ್ಮಕ ಅಂಶಗಳನ್ನು ಉಲ್ಲೇಖಿಸುವವರಿಗೆ. ವಿಡಿಯೋ ಮಾಡುವವರಿಗೆ ತಿಂಗಳು ತಿಂಗಳು ಹಣ ನೀಡಲು ಸರ್ಕಾರ ನಿರ್ಧರಿಸಿದೆ ಅದು ಸಾವಿರ ಹತ್ತು ಸಾವಿರ ಅಲ್ಲ 5 ಲಕ್ಷ, 4 ಲಕ್ಷ ಹಾಗೂ 3 ಲಕ್ಷ ರೂಪಾಯಿಗಳನ್ನು ನೀಡಲು ನಿರ್ಧರಿಸಲಾಗಿದೆ.  ಯೂಟ್ಯೂಬ್​ನಲ್ಲಿ ಶಾರ್ಟ್ಸ್​ ಹಾಗೂ ಪೋಡೋ ಕಾಸ್ಟ್‌​ಗಳಿಗೆ ತಿಂಗಳಿಗೆ 8 ಲಕ್ಷ 7 ಲಕ್ಷ 6 ಲಕ್ಷ 4 ಲಕ್ಷ ರೂಪಾಯಿಗಳನ್ನು ಆಯಾ ವಿಡಿಯೋ ಹಾಗೂ ಶಾರ್ಟ್ಸ್​ಗಳ ಮಾನದಂಡಗಳ ಮೇಲೆ ನೀಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.