ನವದೆಹಲಿ : ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿಜೆಪಿಗೆ ಸೇರಿದ ನಾಯಕರನ್ನು ಬಿಜೆಪಿ ಶಾಸಕ ಬಾಲಮುಕುಂದ ಆಚಾರ್ಯ ಗಂಗಾಜಲ ಮತ್ತು ಗೋಮೂತ್ರವನ್ನು ಸಿಂಪಡಿಸಿ ಶುದ್ಧೀಕರಣ ಮಾಡಿದ ಘಟನೆ ಜೈಪುರದಲ್ಲಿ ನಡೆದಿದೆ.

ಜೈಪುರ ನಗರಪಾಲಿಕೆ ಸದಸ್ಯರನ್ನು ರಾಜಸ್ಥಾನದ ಎಂಎಲ್​​ಎ ಬಾಲಮುಕುಂದ ಗೋಮೂತ್ರ ಸಿಂಪಡಿಸಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಭ್ರಷ್ಟಾಚಾರದ ಆರೋಪ ಎದುರಿಸಿದ್ದ ಮಾಜಿ ಮೇಯರ್ ಮುನೇಶ್ ಗುರ್ಜಾರ್ ಅವರ ಹುದ್ದೆಗೆ ಇದೀಗ ಬಿಜೆಪಿ ಕುಸುಮ್ ಯಾದವ್ ರನ್ನು ಆಯ್ಕೆ ಮಾಡಲಾಗಿದೆ.

ಈ ಸಂದರ್ಭದಲ್ಲಿ 7 ಕಾಂಗ್ರೆಸ್ ಮತ್ತು ಓರ್ವ ಸ್ವತಂತ್ರ ಸದಸ್ಯರು ಬೆಂಬಲವನ್ನು ಸೂಚಿಸಿದ್ದಾರೆ. ಇವರೆಲ್ಲರೂ ಬಿಜೆಪಿಗೆ ಸೇರಿದ್ದು, ಅವರನ್ನು ಮಾತ್ರವಲ್ಲ ಜೈಪುರ ಮಹಾನಗರ ಪಾಲಿಕೆಯನ್ನೂ ಗೋಮೂತ್ರದಿಂದ ಶುದ್ಧೀಕರಿಸಿದ್ದಾರೆ.