ವಯನಾಡ್: ಕೇರಳದ ವಯ್ನಾಡ್‌ನಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು ಸಂಪೂರ್ನ ನಾಲ್ಕು ಗ್ರಾಮಗಳೇ ನಾಪತ್ತೆಯಾಗಿದೆ ಎನ್ನಲಾಗಿದೆ. ಇಲ್ಲಿಯವರೆಗೂ 40ಕ್ಕೂ ಅಧಿಕ ಮಂದಿ ಸಾವು ಕಂಡಿದ್ದಾರೆ ಎನ್ನಲಾಗಿದೆ. ಭಾರಿ ಮಳೆ, ಭೂಕುಸಿತದ ಬೆನ್ನಲ್ಲಿಯೇ ಸಂಭವಿಸಿದ ಪ್ರವಾಹದಲ್ಲಿ ಶವಗಳು ವಯನಾಡ್ ಜಿಲ್ಲೆಯ ಗಲ್ಲಿಗಲ್ಲಿಗಳಿಗೆ ತೇಲಿಬಂದಿವೆ ಎನ್ನಲಾಗಿದೆ.
ನಿಲಂಬೂರಿನ ಪೋತುಕಲ್ ಪ್ರದೇಶದ ನದಿಯಲ್ಲಿ 19 ಮಂದಿಯ ಶವಗಳು ವಿವಿಧೆಡೆ ಕೊಚ್ಚಿ ಹೋಗಿವೆ. ಬೆಳಗಿನ ಜಾವ ಹಲವೆಡೆ ಇತರ ದೇಹಗಳು ಹಾಗೂ ದೇಹದ ಭಾಗಗಳು ತೇಲುತ್ತಿವೆ ಎಂದು ವರದಿಯಾಗಿದೆ. ಒಂದು ಮಗು ಸೇರಿದಂತೆ ಆರು ಮಂದಿಯ ಮೃತದೇಹಗಳು ಮುಂಜಾನೆ ಪತ್ತೆಯಾಗಿವೆ. ಪೋತುಕಲ್ ವಯನಾಡಿನ ಗಡಿ ಪ್ರದೇಶವಾಗಿದ್ದು, ಚಾಲಿಯಾರ್ ಅರಣ್ಯದ ಮೂಲಕ ಬಂದ ಬಲವಾದ ಪ್ರವಾಹದಲ್ಲಿ ಮೃತದೇಹಗಳು ಜನನಿಬಿಡ ಪ್ರದೇಶವನ್ನು ತಲುಪಿವೆ ಎಂದು ಶಂಕಿಸಲಾಗಿದೆ.
ವಯನಾಡ್‌ನ ಭೂಕುಸಿದ ಪ್ರದೇಶ ಎಷ್ಟು ತೀವ್ರವಾಗಿದೆಯೆಂದರೆ, ಸೇನಾ ಹೆಲಿಕಾಪ್ಟರ್‌ಗೆ ಈ ಪ್ರದೇಶದಲ್ಲಿ ಲ್ಯಾಂಡ್ ಮಾಡಲು ಕೂಡ ಸಾಧ್ಯವಾಗಲಿಲ್ಲ. ರಕ್ಷಣಾ ಸಿಬ್ಬಂದಿಯನ್ನು ಹೊತ್ತ ಸೇನಾ ಹೆಲಿಕಾಪ್ಟರ್‌ಅನ್ನು ಭೂಕುಸಿತ ಪ್ರದೇಶಕ್ಕೆ ಕೇಂದ್ರ ಸರ್ಕಾರ ಕಳಿಸಿತ್ತು. ಆದರೆ, ಇಡೀ ಪ್ರದೇಶ ಯಾವ ರೀತಿಯಲ್ಲಿ ಕೊಚ್ಚಿ ಹೋಗಿದೆಯೆಂದರೆ, ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ಕೂಡ ಸ್ಥಳವಿದ್ದಿರಲಿಲ್ಲ. ಕೊನೆಗೆ ಕೋಯಿಕ್ಕೋಡ್‌ನಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಆಗಿದ್ದು, ಅಲ್ಲಿಂದ ಸೇನಾ ತಂಡವನ್ನು ಕರೆಸಿಕೊಳ್ಳಲಾಗಿದೆ.

