ಕೇರಳ : ವಯನಾಡಿನಲ್ಲಿ ಭೀಕರವಾಗಿ ಭೂಕುಸಿತ ದುರಂತ ದಲ್ಲಿ ಇದೀಗ ಸಾವಿನ ಸಂಖ್ಯೆ 24ಕಕೆ ಏರಿಕೆಯಾಗಿದೆ. ಮಣ್ಣಿನ ಅಡಿಯಲ್ಲಿ ನೂರಾರು ಮಂದಿ ಜೀವಂತ ಸಮಾಧಿ ಆಗಿರುವ ಆತಂಕ ವ್ಯಕ್ತವಾಗುತ್ತಿದೆ. ವಯನಾಡು ಜಿಲ್ಲೆಯಲ್ಲಿ ಭೂಕುಸಿತದ ನಂತರ ರಕ್ಷಣಾ ಕಾರ್ಯಾಚರಣೆಗಾಗಿ ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳು ಫೀಲ್ಡಿಗೆ ಇಳಿದಿವೆ.

ಭೂಕುಸಿತದಲ್ಲಿ ಗಾಯಗೊಂಡ 50 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಡಕ್ಕೈ ಟೌನ್‌ನಲ್ಲಿ ರಾತ್ರಿ 1 ಗಂಟೆ ಸುಮಾರಿಗೆ ಭಾರೀ ಮಳೆಯ ಸಂದರ್ಭದಲ್ಲಿ ಮೊದಲ ಭೂಕುಸಿತ ಸಂಭವಿಸಿದೆ. ಮತ್ತೊಮ್ಮೆ  ಮುಂಜಾನೆ 4 ಗಂಟೆ ಸುಮಾರಿಗೆ ಚುರಲ್ ಮಾಳದ ಶಾಲೆಯೊಂದರ ಬಳಿ ಎರಡನೇ ಭೂಕುಸಿತ ಸಂಭವಿಸಿದೆ. ಶಾಲೆಯ ಸುತ್ತಮುತ್ತಲಿನ ಮನೆಗಳು, ಅಂಗಡಿಗಳು ಗುಡ್ಡ ಕುಸಿತದಿಂದ ನಾಶ ಆಗಿವೆ.

ತುರ್ತು ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆ 9656938689 ಮತ್ತು 8086010833 ನೀಡಲಾಗಿದೆ. ಜೊತೆಗೆ ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳು ಎಂಐ -17 ಮತ್ತು ಒಂದು ಎಎಲ್‌ಹೆಚ್, ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಕಚೇರಿ (CMO) ತಿಳಿಸಿದೆ.