ಕೇರಳ : ವಯನಾಡಿನಲ್ಲಿನ ಭೀಕರ ಕುಸಿತವನ್ನು ಇನ್ನೂ ಅರಗಿಸಿಕೊಳ್ಳಲಾಗದ ಬೆನ್ನಲ್ಲೇ ಕೇರಳದ ಮತ್ತೊಂದೆಡೆ 9 ಬಾರಿ ಗುಡ್ಡ ಕುಸಿತಗೊಂಡಿದೆ. ಪರಿಂಣಾಮ ಕಟುಂಬಗಳು ಸಂಪರ್ಕ ಕಳೆದುಕೊಂಡಿದ್ದು ಆತಂಕದಲ್ಲಿದ್ದಾರೆ.ಕೋಯಿಕ್ಕೋಡ್ ಜಿಲ್ಲೆಯ ವಿಲಂಗಾಡ್‌ನ ವನಿಮೆಲ್ ಪಂಚಾಯತ್‌ನಲ್ಲಿ ಭೂಕುಸಿತ ಸಂಭವಿಸಿದ್ದು, ಒರ್ವ ವ್ಯಕ್ತಿ ನಾಪತ್ತೆಯಾಗಿ, 12 ಮನೆಗಳು ಸಂಪೂರ್ಣವಾಗಿ ನಾಶವಾಗಿದೆ. ಎರಡು ಸೇತುವೆಗಳು ಮತ್ತು ಹಲವಾರು ವ್ಯಾಪಾರ ಸಂಸ್ಥೆಗಳು ಕೂಡ ನಾಶವಾಗಿದೆ.
ಕಳೆದ ರಾತ್ರಿ ಕೋಝಿಕ್ಕೋಡ್‌ನ ಉತ್ತರ ಪ್ರದೇಶದ ವಾಣಿಮೆಲ್ ಪಂಚಾಯತ್‌ನ ವಿಲಂಗಾಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಾದ ಆದಿಚಿಪ್ಪಾರ, ಮಂಜಚಲ್ಲಿ, ಕುತ್ತಲ್ಲೂರ್ ಮತ್ತು ಪನ್ನಿಯೇರಿಯಲ್ಲಿ ಭೂಕುಸಿತ ಸಂಭವಿಸಿದೆ. ಸತತ ಒಂಬತ್ತು ಬಾರಿ ಭೂಕುಸಿತ ಸಂಭವಿಸಿದೆ.ಭಾರೀ ಮಳೆಯಿಂದಾಗಿ ಮಾಹೆ ನದಿಯ ಉಗಮಸ್ಥಾನವಾದ ಪುಲ್ಲುವ ನದಿಯಲ್ಲಿ ಪ್ರವಾಹಕ್ಕೆ ದೊಡ್ಡ ಬಂಡೆಗಳು ಮತ್ತು ಮರಗಳು ಕೊಚ್ಚಿಹೋಗಿದೆ. ಇದರ ಪರಿಣಾಮ ನದಿ ದಂಡೆಯಲ್ಲಿದ್ದ 12 ಮನೆಗಳು ಸಂಪೂರ್ಣ ಜಖಂಗೊಂಡಿದ್ದು, ಹಲವು ವಾಹನಗಳು ಜಖಂಗೊಂಡಿವೆ.
ಇನ್ನೂ ರಕ್ಷಣೆಗೆಂದು ಧಾವಿಸಿದ್ದ ಸ್ಥಳೀಯ ಕುಳತ್ತಿಕಲ್ ನಿವಾಸಿ ಮ್ಯಾಥ್ಯೂ ಈಗ ನಾಪತ್ತೆಯಾಗಿದ್ದಾರೆ. ಭೂಕುಸೊತದಿಂದ ನದಿಯ 5 ಕಿ.ಮೀ ವ್ಯಾಪ್ತಿಯಲ್ಲಿ ಭಾರಿ ಹಾನಿಯುಂಟಾಗಿದೆ.

