ನವದೆಹಲಿ: ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್‌ ನೀಡಿದ್ದ ಮಧ್ಯಂತರ ಜಾಮೀನಿನ ಅವಧಿ ಭಾನುವಾರ ಪೂರ್ಣಗೊಳ್ಳಲಿದ್ದು, ಅಂದು ಮದ್ಯಾಹ್ನ ೩ ಗಂಟೆಗೆ ಶರಣಾಗುವುದಾಗಿ ಅವರು ತಿಳಿಸಿದ್ದಾರೆ.

ʼನಾಡಿದ್ದು ೩ ಗಂಟಿಗೆ ನಾನು ಶರಣಾಗಲು ಸಿದ್ಧನಿದ್ದೇನೆ. ನಾವು ದೌರ್ಜನ್ಯದ ವಿರುದ್ಧ ಹೋರಾಡುತ್ತಿದ್ದು, ದೇಶಕ್ಕಾಗಿ ಪ್ರಾಣವನ್ನು ಬೇಕಾದರೂ ಕೊಡಲು ಸಿದ್ಧನಿದ್ದೇನೆʼ ಎಂದು ಸುದ್ದಿಗೋಷ್ಠಿಯಲ್ಲಿ ಕೇಜ್ರಿವಾಲ್‌ ಮಾಹಿತಿ ನೀಡಿದರು.

ಜೈಲಿನಲ್ಲಿ ತಮ್ಮನ್ನು ನಡೆಸಿಕೊಂಡ ರೀತಿಯ ಬಗ್ಗೆ ವಿವರಿಸಿದ ಕೇಜ್ರಿವಾಲ್‌, ಬಂಧನದಲ್ಲಿದ್ದ 50 ದಿನಗಳಲ್ಲಿ ನನ್ನ ಆರೋಗ್ಯ ಹದಗೆಟ್ಟಿದ್ದು, ತೂಕವನ್ನೂ ಕಳೆದುಕೊಂಡಿದ್ದೇನೆ. ಬಿಡುಗಡೆಯಾದಮೇಲೆ ಸಹ ಮೊದಲಿನಂತಾಗಲು ಸಾಧ್ಯವಾಗಲಿಲ್ಲ ಎಂದರು.

ಯಾವುದೇ ಸವಾಲು ಎದುರಾದರೂ ತಮ್ಮ ಆದ್ಯತೆ ದೆಹಲಿ ಜನರ ಕಲ್ಯಾಣವೇ ಆಗಿರುತ್ತದೆ ಎಂದ ಅವರು, ಉಚಿತ ವಿದ್ಯುತ್, ಮೊಹಲ್ಲಾ ಕ್ಲಿನಿಕ್‌, ಆಸ್ಪತ್ರೆ, ಉಚಿತ ಔಷಧಿ, ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಸೇರಿದಂತೆ ಹಲವು ಅಗತ್ಯ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.