ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಮಹಿಳೆಯೊಬ್ಬರು ಬುರ್ಖಾ ಧರಿಸಿ ಪವಿತ್ರ ಕನ್ವರ್ ಯಾತ್ರೆ ಕೈಗೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಬುರ್ಖಾ ಧರಿಸಿರುವ ಮಹಿಳೆ ಹರಿದ್ವಾರದ ಹರ್ ಕಿ ಪೌರಿಯಿಂದ ಗಂಗಾಜಲ ಸಂಗ್ರಹಿಸಿ, ಮಹಾಶಿವರಾತ್ರಿಯಂದು ಶಿವನಿಗೆ ಜಲಾಭಿಷೇಕ ನೆರವೇರಿಸುವ ಉದ್ದೇಶದಿಂದ 171 ಕಿಲೋಮೀಟರ್ ಕಾಲ್ನಡಿಗೆ ಪ್ರಯಾಣ ಮಾಡಿದ್ದಾರೆ.

ತಮನ್ನಾ ಮಲಿಕ್ ಎಂಬ ಮಹಿಳೆ ಪತಿ ಅಮನ್ ತ್ಯಾಗಿ ಅವರೊಂದಿಗೆ ಸೇರಿ ಹರಿದ್ವಾರದಿಂದ ಸಂಭಾಲ್‌ವರೆಗೆ ಕನ್ವರ್ ಹೊತ್ತು ಯಾತ್ರೆ ಆರಂಭಿಸಿದ್ದಾರೆ. ಹರ್ ಕಿ ಪೌರಿಯಿಂದ ಪವಿತ್ರ ಗಂಗಾಜಲವನ್ನು ತೆಗೆದುಕೊಂಡು, ತಮ್ಮ ಹೆಗಲ ಮೇಲೆ ಕನ್ವರ್ ಹೊತ್ತು ಸಾಗುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.