ದುಬೈನಲ್ಲಿ ಕನ್ನಡ ಹಬ್ಬ “ಕರ್ನಾಟಕ ರಾಜ್ಯೋತ್ಸವ-2025 ಕಾರ್ಯಕ್ರಮವನ್ನು ಕನ್ನಡಿಗರ ಕೂಟ, ದುಬೈ ಮತ್ತು ಗಲ್ಫ್ ಕನ್ನಡ  ಮೂವಿಸ್‌ ಸಹಯೋಗದಲ್ಲಿ ನವೆಂಬರ್ 8 ರಂದು GEMS CAMBRIDGE INTERNATIONAL SCHOOL, Al Quasis (AL TAWAR) ಆಯೋಜಿಸಲಾಗಿದೆ.

ಈ ಲಿಂಕ್ ಬಳಸಿ ನೋಂದಾಯಿಸಿ : https://tinyurl.com/krdxb2025. ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆ ಮುಖ್ಯ ಅತಿಥಿ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್,  ಡಾ.ರೊನಾಲ್ಡ್ ಕೊಲಾಸೊ ಮಾನವತಾ ಹಿತೈಷಿ ಮತ್ತು ಸಮಾಜ ಸೇವಕರು. ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ  ಭಾಗವಹಿಸಲಿದ್ದಾರೆ.

Zee Kannada ಕಾಮಿಡಿ ಕಿಲಾಡಿಗಳ  ಹಾಸ್ಯ ಮನೋರಂಜನೆ ನಡೆಯಲಿದೆ. ಇನ್ನಷ್ಟು ಆಕರ್ಷಕ ಪ್ರದರ್ಶನಗಳು ಇರಲಿದೆ. ಮುಕ್ತ ಪ್ರವೇಶ, ನಂತರ ರಾತ್ರಿ ಭೋಜನ ವ್ಯವಸ್ಥೆ ಇರಲಿದೆ.

ತಾವೆಲ್ಲರೂ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಬಂದು, ದುಬೈ ನ ಇತಿಹಾಸದಲ್ಲೇ ಕಂಡರಿಯದ ಅತೀ ದೊಡ್ಡ ರಾಜ್ಯೋತ್ಸವ ಆಚರಿಸಿ ಯಶಸ್ವಿಗೊಳಿಸೋಣ ಹಾಗು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಶ್ರೇಷ್ಠವಾಗಿ ಆಚರಿಸಲು ಒಂದಾಗೋಣ.