ನವದೆಹಲಿ: ಅದಾನಿ ಗ್ರೂಪ್ ಹಗರಣದಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಕೂಡಾ ಭಾಗಿಯಾಗಿರುವ ಬಗ್ಗೆ ಹಿಂಡನ್‌ಬರ್ಗ್ ವರದಿ ಬೆನ್ನಲ್ಲೇ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಸಂಸದೆ, ನಟಿ ಕಂಗನಾ ರಣಾವತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ರಾಹುಲ್ ಗಾಂಧಿ ಅತ್ಯಂತ ಅಪಾಯಕಾರಿ ವ್ಯಕ್ತಿ” ಎಂದು ಕಂಗನಾ ಹೇಳಿದ್ದಾರೆ.
ಹಿಂಡನ್‌ಬರ್ಗ್‌ನ ಹೊಸ ಸಂಶೋಧನಾ ವರದಿ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡುತ್ತಾ ರಾಹುಲ್ ಗಾಂಧಿಯತ್ತ ಬೊಟ್ಟು ಮಾಡಿರುವ ಕಂಗನಾ, “ರಾಹುಲ್ ಗಾಂಧಿ ಅತ್ಯಂತ ಅಪಾಯಕಾರಿ ವ್ಯಕ್ತಿ. ಕಹಿ, ವಿಷಕಾರಿ ಮತ್ತು ವಿನಾಶಕಾರಿ ವ್ಯಕ್ತಿಯಾಗಿದ್ದಾರೆ. ತಾನು ಪ್ರಧಾನಿಯಾಗಲು ಸಾಧ್ಯವಾಗದಿದ್ದರೆ ಈ ದೇಶವನ್ನೇ ನಾಶಪಡಿಸುವುದು ರಾಹುಲ್ ಗಾಂಧಿ ಅಜೆಂಡಾ” ಎಂದು ಆರೋಪಿಸಿದ್ದಾರೆ.
“ನಮ್ಮ ಷೇರು ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ರಾಹುಲ್ ಗಾಂಧಿ ಅನುಮೋದಿತ ಹಿಂಡನ್‌ಬರ್ಗ್ ವರದಿಯು ನಿನ್ನೆ ರಾತ್ರಿ ಟುಸ್ ಪಟಾಕಿಯಾಗಿದೆ. ಅವರು ಈ ರಾಷ್ಟ್ರದ ಭದ್ರತೆ ಮತ್ತು ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಬೇಕಾದ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಬಿಜೆಪಿ ಸಂಸದೆ ದೂರಿದ್ದಾರೆ.

