ಚೆನ್ನೈ: ತಮಿಳುನಾಡು ಸಂಕ್ರಾಂತಿ ಹಬ್ಬದ ಸಮಯದಲ್ಲಿ ಪದೇ ಪದೇ ದೊಡ್ಡ ಸದ್ದು ಮಾಡುತ್ತೆ. ಪೊಂಗಲ್ ಪ್ರಯುಕ್ತ ನಡೆಯುವ ಸಾಂಪ್ರದಾಯಿಕ ಜಲ್ಲಿಕಟ್ಟು ಸ್ಪರ್ಧೆಗಳಲ್ಲಿ ನಿರಂತರವಾಗಿ ಸಾವು ನೋವು ಸಂಭವಿಸುತ್ತಿರುವ ಆರೋಪ ಕೇಳಿ ಬಂದಿದೆ. ಈ ಬಾರಿ ಕೂಡ ಅದೇ ರೀತಿಯಾಗಿ ಸಾವು ನೋವು ಸಂಭವಿಸಿದೆ.

ಕಾಣುಂ ಪೊಂಗಲ್ ಹಿನ್ನೆಲೆ ತಮಿಳುನಾಡಿನ ವಿವಿಧೆಡೆ ನಡೆದ ಜಲ್ಲಿಕಟ್ಟು ಮತ್ತು ಮಂಜುವಿರಾಟ್ಟು ಸ್ಪರ್ಧೆಗಳಲ್ಲಿ ಒಟ್ಟಾರೆ 7 ಜನರು ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿದೆ. ಹಾಗೂ ನೂರಾರು ಜನ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಮೃತರಲ್ಲಿ ಸಿರವಯಲ್‌ನಲ್ಲಿ ನಡೆದ ಮಂಜುವಿರಾಟ್ಟು ಸ್ಪರ್ಧೆ ವೇಳೆ, ಕಣದಿಂದ ಓಡಿ ಹೋಗುವಾಗ ಕಂಬನೂರಿನ ಜಮೀನಿನ ಬಾವಿಗೆ ಬಿದ್ದು ಗೂಳಿ ಮತ್ತು ಗೂಳಿಯ ಮಾಲೀಕ ಮೃತಪಟ್ಟಿದ್ದಾನೆ.