ಮುಂಬೈ : ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಹೆಸರಿನಲ್ಲಿ ಭಾರತ ಕಾರ್ಯಾಚರಣೆ ನಡೆಸಿದ ಬಳಿಕ ಭಾರತ ಹಾಗೂ ಪಾಕ್ ನಡುವೆ ಉದ್ವಿಗ್ನ ವಾತಾವರಣ ಹೆಚ್ಚಾಗಿದ್ದು, ಇದೀಗ ಈ ಬಗ್ಗೆ ಬಾಲಿವುಡ್‌ನ ಖ್ಯಾತ ಬರಹಗಾರ ಜಾವೇದ್ ಅಖ್ತರ್ ಕಿಡಿಕಾರಿದ್ದಾರೆ.

ಈ ಬಗ್ಗೆ ಪುಸ್ತಕ ಬಿಡುಗಡೆ ಸಮಾರಂಭವೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದು ವೇಳೆ ನರಕ ಮತ್ತು ಪಾಕಿಸ್ತಾನದ ನಡುವೆ ಆಯ್ಕೆ ಮಾಡುವ ಪರಿಸ್ಥಿತಿ ಬಂದರೆ, ನಾನು ನರಕವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

ನಾನು ಮುಂಬೈಗೆ ಬಂದಾಗ ನನಗೆ 19 ವರ್ಷ ವಯಸ್ಸಾಗಿತ್ತು. ಈ ನೆಲದಲ್ಲಿ ನಾನು ಏನಾಗಬೇಕು ಅಂದುಕೊಂಡಿದ್ದೆನೋ ಅದು ಆಗಿದ್ದೇನೆ, ಇದಕ್ಕೆ ನನ್ನ ನೆಲವೇ ಕಾರಣ, ಹೀಗಾಗಿ ನೀನು ಭಾರತ ಬಿಟ್ಟು ಪಾಕಿಸ್ತಾನ ಅಥವಾ ನರಕಕ್ಕೆ ಹೋಗುತ್ತೀಯ ಎಂದು ಕೇಳಿದರೆ ನಾನು ನರಕವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಜಾವೇದ್ ಅಖ್ತರ್ ತಿಳಿಸಿದರು.

ಪಾಕಿಸ್ತಾನದರು ಕಾಶ್ಮೀರಿಗಳ ಹೃದಯದಲ್ಲಿ ನಾವಿದ್ದೇವೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ, ಆದರೆ ನಿಜಾಂಶ ಏನೆಂದರೆ, ಸ್ವಾತಂತ್ರ್ಯದ ಬಳಿಕ ಪಾಕ್ ಭಾರತದ ಮೇಲೆ ದಾಳಿ ಮಾಡಿದಾಗ ಮೂರು ದಿನಗಳ ಕಾಲ ಅವರನ್ನು ತದೆದಿದ್ದು, ಇದೇ ಕಾಶ್ಮೀರಿಗಳು, ಸತ್ಯವೆಂದರೆ, ಕಾಶ್ಮೀರಿಗಳು ಭಾರತವಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದರು.