ನವದೆಹಲಿ : ಸೆಪ್ಟೆಂಬರ್‌ 4ರಂದು ಆರಂಭವಾಗಬೇಕಿದ್ದ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯನ್ನು ಮುಂದೂಡಲಾಗಿದೆ. ಅಕ್ಟೋಬರ್‌ 6ರ ನಂತರ ಆರಂಭವಾಗುವ ಸಾಧ್ಯತೆ ಇದೆ.

ಈ ಬಾರಿ 13 ತಂಡಗಳು ಮಾತ್ರ ಕಣಕ್ಕಿಳಿಯಲಿವೆ. ಐಎಫ್‌ಎಲ್‌ ಹಾಲಿ ಚಾಂಪಿಯನ್‌ ಡೈಮಂಡ್‌ ಹಾರ್ಬರ್‌ ಎಫ್‌ಸಿ ತಂಡವು ನಿಗದಿತ ಗಡುವಿನೊಳಗೆ ಪ್ರವೇಶ ಶುಲ್ಕ ಪಾವತಿಸದ ಕಾರಣ, ಟೂರ್ನಿಯಿಂದ ಹೊರಗಿಡಲಾಗಿದೆ.

‘ಫಿಫಾ ಅಂತರರಾಷ್ಟ್ರೀಯ ಪಂದ್ಯಗಳು ಸೆ.21ರಿಂದ ಅ.6ರ ವರೆಗೆ ನಡೆಯಲಿವೆ. ಹೀಗಾಗಿ, ಈ ಅವಧಿ (ವಿಂಡೊ) ಮುಗಿದ ನಂತರ ಐಎಸ್‌ಎಲ್‌ ಆಯೋಜಿಸಲಾಗುವುದು’ ಎಂದು ಎಐಎಫ್‌ಎಫ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.