ಟೆಹ್ರಾನ್: ಶನಿವಾರ (ಜುಲೈ 06) ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಇರಾನ್ ನ ಸುಧಾರಣಾವಾದಿ ಅಭ್ಯರ್ಥಿ ಮಸೌದ್ ಪೆಝೆಶ್ಕಿಯಾನ್ ಅವರು ಪ್ರತಿಸ್ಪರ್ಧಿ ಆಲ್ಟ್ರಾ ಕನ್ಸರ್ವೇಟಿವ್ ನ ಸಯೀದ್ ಜಲೀಲಿ ಅವರನ್ನು ಸೋಲಿಸಿ ಗೆಲುವು ಸಾಧಿಸಿರುವುದಾಗಿ ಇರಾನ್ ನ ಆಂತರಿಕ ಸಚಿವಾಲಯ ತಿಳಿಸಿದೆ.
ಅಧ್ಯಕ್ಷೀಯ ಚುನಾವಣೆಯಲ್ಲಿ 30 ಲಕ್ಷ ಮತದಾನವಾಗಿದ್ದು, ಪೆಝೆಶ್ಕಿಯಾನ್ 16 ಲಕ್ಷಕ್ಕೂ ಅಧಿಕ ಮತ ಪಡೆದು ಜಯಗಳಿಸಿದ್ದಾರೆ. ಸಯೀದ್ ಜಲೀಲಿ 13 ಲಕ್ಷಕ್ಕೂ ಅಧಿಕ ಮತ ಪಡೆದು ಪರಾಜಯಗೊಂಡಿರುವುದಾಗಿ ಚುನಾವಣಾಧಿಕಾರಿ ಮೋಹ್ಸೆನ್ ಇಸ್ಲಾಮಿ ತಿಳಿಸಿದ್ದಾರೆ. ಶೇ.49.8ರಷ್ಟು ಮತದಾನವಾಗಿತ್ತು. ಸುಮಾರು 6,00,000 ಲಕ್ಷಕ್ಕೂ ಅಧಿಕ ಮತಗಳು ಅಸಿಂಧುವಾಗಿರುವುದಾಗಿ ವರದಿ ವಿವರಿಸಿದೆ.

