ಮುಂಬೈ  : ಎರಡು ದಿನಗಳ ಹಿಂದೆ ನಡೆದ ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್‌ ಬ್ರಹ್ಮಪುತ್ರದಲ್ಲಿ ಬೆಂಕಿ ಬಿದ್ದ  ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಸೈಲರ್‌ ಶವ ಘಟನೆ ನಡೆದ 48 ಗಂಟೆಗಳ ನಂತರ ಪತ್ತೆಯಾಗಿದೆ. ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದ ಸೀಮನ್‌ ಸತ್ಯೇಂದ್ರ ಸಿಂಗ್ ಅವರು ನಡಡೆದ ದುರಂತದಲ್ಲಿ ನಾಪತ್ತೆಯಾಗಿದ್ದರು . ಇದೀಗ ಅವರ ಶವ ಪತ್ತೆಯಾಗಿದೆ.

.ಐಎಸ್‌ಎಸ್ ಬ್ರಹ್ಮಪುತ್ರ ಯುದ್ಧನೌಕೆಯ ನಿರ್ವಹಣೆ ಹಾಗೂ ಮರುಜೋಡಣೆ ವೇಳೆ ಹಠಾತ್ ಆಗಿ ನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದರಿಂದ ನೈಕೆಗೆ ಭಾರಿ ಹಾನಿಯಾಗಿದ್ದು ಒಂದೇ ವಾಲಿಕೊಂಡಿತ್ತು ಈ ದುರ್ಘಟನೆಯಲ್ಲಿ ಸೈಲರ್ ಸೀಮನ್‌ ಸತ್ಯೇಂದ್ರ ಸಿಂಗ್  ನಾಪತ್ತೆಯಾಗಿದ್ದರು. ಭಾನುವಾರ ರಾತ್ರಿ ಈ ಘಟನೆ ನಡೆದಿತ್ತು.  ಮುಂಬೈನ ನೌಕಾಪಡೆಗೆ ಸೇರಿದ ಬಂದರಿನಲ್ಲಿ ನಿರ್ವಹಣೆಯ ಕಾರಣಕ್ಕಾಗಿ ಈ ಹಡಗನ್ನು ನಿಲ್ಲಿಸಲಾಗಿತ್ತು.