ಮಧ್ಯ ಪ್ರದೇಶ : ಹಿಂದೂಗಳು ಪವಿತ್ರ ರಾಮಜನ್ಮಭೂಮಿಯಲ್ಲಿ ಬಾಲರಾಮನ ಪ್ರತಿಷ್ಠಾಪನೆಯಾಗಿ ಒಂದುವರ್ಷ ಪೂರೈಸಿದೆ. ಈ ಸಂತಸದ ಬೆನ್ನಲ್ಲೇ RSS ಮುಖ್ಯಸ್ಥ ಮೋಹನ್ ಭಾಗವತ್ ನೀಡಿರುವ ಹೇಳಿಕೆ ದೊಡ್ಡ ಸಂಚಲನ ಮೂಡಿಸಿದೆ.
ಭಾರತಕ್ಕೆ ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಸಿಕ್ಕಿದ್ದು ರಾಮಜನ್ಮಭೂಮಿಯಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪನೆ ಆದ ನಂತರ ಎಂದಿದ್ದಾರೆ. ರಾಮನ ಪ್ರಾಣಪ್ರತಿಷ್ಠೆ ನಂತರ ಭಾರತಕ್ಕೆ ಸ್ವತಂತ್ರ ಲಭ್ಯವಾಯಿತು.ಆ ದಿನ ನಿಜಕ್ಕೂ ಭಾರತಕ್ಕೆ ದೊಡ್ಡ ಹೆಮ್ಮೆಯ ದಿನ. ಇದನ್ನ ಕಣ್ಣಾರೆ ಕಂಡ ನಾವೇ ಧನ್ಯ ಎಂದು ಮೋಹನ್ ಭಾಗವತ್ ಬಣ್ಣಿಸಿದ್ದಾರೆ.
ಸಾಕಷ್ಟು ಹೋರಾಟದ ಬಳಿಕ ಕಳೆದ ವರ್ಷ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಆಗಿತ್ತು. ಸದ್ಯ ಅಯೋಧ್ಯೆ ದೇಶದ ಅತ್ಯಂತ ಹೆಚ್ಚು ಭೇಟಿ ನೀಡುವ ಧಾರ್ಮಿಕ ಸ್ಥಳವಾಗಿದೆ.

