ಜೈಪುರ: ರಾಜಸ್ಥಾನದ ಬಾರ್ಮರ್ನಲ್ಲಿ ಭಾರತೀಯ ವಾಯುಪಡೆಯ ಮಿಗ್-29 ಯುದ್ಧ ವಿಮಾನ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ಹೇಳಲಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಜೆಟ್ ಕುಸಿದ ನಂತರ ಬೆಂಕಿಯಲ್ಲಿ ಮುಳುಗಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ನಲ್ಲಿ ಕಾಣಿಸಿಕೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಐಎಎಫ್ ಕೂಡ ಹೇಳಿಕೆ ನೀಡಿದೆ.

ಭಾರತೀಯ ವಾಯುಪಡೆಯ ಮಿಗ್ -29 ಫೈಟರ್ ಜೆಟ್ ಸೋಮವಾರ ಸಂಜೆ ಅಪಘಾತಕ್ಕೀಡಾಗಿದೆ. ಗಂಭೀರ ತಾಂತ್ರಿಕ ದೋಷದಿಂದ ಜೆಟ್ ಪತನಗೊಂಡಿದೆ ಎಂದು ಐಎಎಫ್ ತಿಳಿಸಿದೆ.

— Koustuv 🇮🇳 🧭 (@srdmk01) September 2, 2024