ಇಸ್ಲಾಮಾಬಾದ್: ಸದ್ಯ ಜೈಲುವಾಸ ಅನುಭವಿಸುತ್ತಿರುವ ಪಾಕಿಸ್ತಾನ ಮಾಜಿ ಪ್ರಧಾನಿ ಹಾಗೂ ಕ್ರಿಕೆಟಿಗ ಇಮ್ರಾನ್ ಖಾನ್ ಬ್ರಿಟನ್ನ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಚಾನ್ಸಲರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.
ಹಾಲಿ ಕುಲಪತಿ ಕ್ರಿಸ್ ಪ್ಯಾಟನ್ ಹುದ್ದೆಯಿಂದ ಕೆಳಗಿಳಿಯುವ ಘೋಷಣೆ ಮಾಡದ ಬೆನ್ನಲ್ಲೇ ಇಮ್ರಾನ್ ಅರ್ಜಿ ಗುಜರಾಯಿಸಿದ್ದಾರೆ. ಇಮ್ರಾನ್ ಅವರ ಸೂಚನೆ ಮೇರೆಗೆ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯ ಪರೀಕ್ಷೆ ನಡೆಯಲಿದೆ ಎಂದು ಇಮ್ರಾನ್ ಪಕ್ಷ ಪಿಟಿಐನ ವಕ್ತಾರರು ತಿಳಿಸಿದ್ದಾರೆ.
ಇಮ್ರಾನ್ ಖಾನ್ ಅವರು ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯೂ ಹೌದು. ಆಕ್ಸ್ಫರ್ಡ್ ವಿವಿಯಿಂದ ಖಾನ್ 1975ರಲ್ಲಿ ಪದವೀಧರರಾಗಿದ್ದಾರೆ ಇದಕ್ಕೂ ಮೊದಲು ಇಮ್ರಾನ್ ಖಾನ್ ಅವರು 2005ರಿಂದ 2014ರವರೆಗೆ ಬ್ರಾಡ್ಫೋರ್ಡ್ ವಿವಿ ಚಾನ್ಸರಲ್ ಆಗಿದ್ದರು.

