ನವದೆಹಲಿ : ದೆಹಲಿಯಲ್ಲಿ ಪರಿಸರ ಮಾಲಿನ್ಯ ಹೆಚ್ಚುತ್ತಿದ್ದು, ಮನುಷ್ಯರ ಜೀವಿತಾವಧಿ ಕಡಿಮೆಯಾಗ್ತಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೆ ನೀಡಿದ್ದಾರೆ.

ದಿಲ್ಲಿಯಲ್ಲಿ ಮಾಲಿನ್ಯ ಹೆಚ್ಚುತ್ತಿದ್ದು, ಮನುಷ್ಯರಿಗೆ ಸಾಕಷ್ಟು ಸೋಂಕು ತಗುಲುತ್ತಿದೆ. ಕೇವಲ 3 ದಿನ ಉಳಿದುಕೊಂಡರೆ ಪ್ರಾಣಕ್ಕೆ ಸಂಚಕಾರ ಬರುತ್ತಿದೆ. ಜನರ ಪಾಲಿಗೆ ಮೃತ್ಯಕೂಪ ಆಗುತ್ತಿದೆ ಈ ದು ಆತಂಕ ವ್ಯಕ್ತಪಡಿಸಿದ್ದಾರೆ.

ದಿಲ್ಲಿಯಲ್ಲಿ ವಾಸ ಮಾಡ್ತಿರುವ ಜನರ ಜೀವಿತಾವಧಿ 10 ವರ್ಷ ಕಡಿಮೆಯಾಗುತ್ತಿದೆ. ಪರಿಸರ ಕಾಳಜಿಯೇ ಇಲ್ಲ. ಮಾಲಿನ್ಯದಿಂದ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಭವಿಷ್ಯದಲ್ಲಿ ಇದೇ ಪರಿಸ್ಥಿತಿ ಮುಂದುವರೆದ್ರೆ ದೊಡ್ಡ ಅನಾಹುತ ಕಟ್ಟಿಟ್ಟಬುತ್ತಿ ಎಂದು ಎಚ್ಚರಿಸಿದ್ದಾರೆ.