ನವದೆಹಲಿ: ಇನ್ಮುಂದೆ 20 ಕಿ.ಮೀ ಒಳಗೆ ಸಂಚಾರ ಮಾಡಿದರೆ ಟೋಲ್ ದರ ಕಟ್ಟುವಂತಿಲ್ಲ. 2008ರ ರಾಷ್ಟ್ರೀಯ ಹೆದ್ದಾರಿ ನಿಯಮಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿ ಮಹತ್ವದ ಪ್ರಕಟಣೆ ಹೊರಡಿಸಿದೆ.
ಹೊಸ ನಿಯಮದ ಪ್ರಕಾರ ಟೋಲ್ ದರ ವಾಹನಗಳು ಸಂಚರಿಸುವ ದೂರದ ಮೇಲೆ ಅವಲಂಬಿಸುತ್ತದೆ. ವಾಹನಗಳು ಚಲಿಸುವ ದೂರವನ್ನು GPS ಮೂಲಕ ಪರಿಶೀಲಿಸಲಿದ್ದು, ಅದರ ಅನ್ವಯ ದರ ನಿಗದಿ ಮಾಡಲಾಗುತ್ತಿದೆ. ಈ ಹೊಸ ನಿಯಮ GPS ಆಳವಡಿಸಿಕೊಂಡ ವಾಹನಗಳಿಗೆ ಮಾತ್ರ ಅನ್ವಯವಾಗಲಿದೆ.
ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಮೊದಲ 20 ಕಿ.ಮೀ ಉಚಿತವಾಗಿ ಪ್ರಯಾಣಿಸಬಹುದು. 20 ಕಿ.ಮೀ ಒಳಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕ್ರಮಿಸಿದ್ರೆ ಯಾವುದೇ ಟೋಲ್ ದರ ಇರುವುದಿಲ್ಲ. 20 ಕಿ.ಮೀ ನಂತರ ಸಂಚರಿಸುವ ಖಾಸಗಿ ವಾಹನಗಳಿಗೆ ಟೋಲ್ ದರ ಅನ್ವಯವಾಗುತ್ತದೆ.

