ಬಾಂಗ್ಲಾದೇಶ: ಬಾಂಗ್ಲಾದಲ್ಲಿ ನಡೆಯುತ್ತಿರುವ ಅತ್ಯಾಚಾದಿಂದ ಜನ ಕಂಗಾಲಾಗಿದ್ದಾರೆ. ಶೇಖ್ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ ನಂತರವೂ ಬಾಂಗ್ಲಾದೇಶದಲ್ಲಿ ಗಲಭೆ ಇನ್ನೂ ಮುಂದುವೆರಸಿದ್ದಾರೆ. ಈ ಮಧ್ಯೆ ಬಾಂಗ್ಲಾದೇಶದ ವಿಮೋಚನೆಯ ನೆನಪಿಗಾಗಿ ಸ್ಥಾಪಿಸಿದ್ದ, 1971ರ ಪಾಕ್ ಸೇನೆಯ ಶರಣಾಗತಿಯನ್ನು ಪ್ರತಿಬಿಂಬಿಸುವ ಪ್ರತಿಮೆಯನ್ನು ಭಾರತ ವಿರೋಧಿ ಗಲಭೆಕೋರರು ನಾಶಪಡಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಹೇಳಿದ್ದಾರೆ.

1971ರ ಯುದ್ಧದ ನಂತರ ಪಾಕಿಸ್ತಾನ ಶರಣಾದ ಕ್ಷಣವನ್ನು ಚಿತ್ರಿಸುವ ಪ್ರತಿಮೆಗಳನ್ನು ಧ್ವಂಸಗೊಳಿಸಿರುವ ಫೋಟೊಗಳನ್ನು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಅವರು,ʻಮುಜೀಬ್ ನಗರದ ಶಹೀದ್ ಸ್ಮಾರಕ ಸಂಕೀರ್ಣದಲ್ಲಿ 1971ರ ಐತಿಹಾಸಿಕ ಘಟನೆಯನ್ನು ಬಿಂಬಿಸುವ ಪ್ರತಿಮೆಗಳನ್ನು ಭಾರತ ವಿರೋಧಿ ದುಷ್ಕರ್ಮಿಗಳಿಂದ ನಾಶ ಪಡಿಸಿರುವುದನ್ನು ನೋಡಿ ದುಃಖವಾಗಿದೆ” ಎಂದು ತಿರುವನಂತಪುರಂನ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಬರೆದುಕೊಂಡಿದ್ದಾರೆ.

— Shashi Tharoor (@ShashiTharoor) August 12, 2024