ಅಸ್ಸಾಂ: ದಿಬ್ರುಗಢದಲ್ಲಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಾದೇಶಿಕ ಕೇಂದ್ರ ಹೊಸದಾದ ಮತ್ತು ವೆಚ್ಚ-ಪರಿಣಾಮಕಾರಿ ಕ್ಷಯರೋಗ  ಪರೀಕ್ಷಾ ಸಾಧನವನ್ನು ಅಭಿವೃದ್ಧಿಪಡಿಸಿದೆ. ಕ್ರಿಸ್‌ಪಿಆರ್ ಕೇಸ್-ಬೇಸ್ಡ್ ಟಿಬಿ ಡಿಟೆಕ್ಷನ್ ಸಿಸ್ಟಮ್ ಎಂದು ಹೆಸರಿಸಲಾದ ಈ ಅದ್ಭುತ ವ್ಯವಸ್ಥೆ ಕೇವಲ ₹35 ರ ಕನಿಷ್ಠ ವೆಚ್ಚದಲ್ಲಿ ರೋಗಿಯ ಕಫವನ್ನು ಬಳಸಿಕೊಂಡು ರೋಗವನ್ನು ಗುರುತಿಸುತ್ತದೆ. ಈ ಯಂತ್ರ ಹಗುರ ಮತ್ತು ಪೋರ್ಟಬಲ್ ಕೂಡ ಆಗಿದೆ.

ಈ ಹೊಸ ಸಾಧನ ಹಳೆಯ ಪರೀಕ್ಷಾ ವಿಧಾನಗಳನ್ನು ಮೀರಿ ಹೊಸ ತಂತ್ರಜ್ಞಾನವನ್ನ ಒಳಗೊಂಡಿದೆ. ಈ ಹಿಂದಿನ ಸಾಂಪ್ರದಾಯಿಕ ವಿಧಾನಗಳು ಋಣಾತ್ಮಕ TB ಫಲಿತಾಂಶವನ್ನು ದೃಢೀಕರಿಸಲು 42 ದಿನಗಳವರೆಗೆ ಸಮಯ ಹಿಡಿಯುತ್ತಿತ್ತು. ಆದ್ರೆ ICMR ಪ್ರಕಾರ, CRISPR-ಆಧಾರಿತ ವ್ಯವಸ್ಥೆ ಸುಮಾರು 2.5 ಗಂಟೆಗಳ ಒಳಗೆ 1,500 ಮಾದರಿಗಳನ್ನು ಪರೀಕ್ಷಿಸಬಹುದು.

ಟಿಬಿ ಪತ್ತೆ ವ್ಯವಸ್ಥೆಯ ವಾಣಿಜ್ಯೀಕರಣಕ್ಕಾಗಿ ಐಸಿಎಂಆರ್ ಪಾಲುದಾರರನ್ನು ಹುಡುಕುತ್ತಿದೆ.ICMR ಒಂದು CRISPR ಕೇಸ್-ಆಧಾರಿತ TB ಪತ್ತೆ ವ್ಯವಸ್ಥೆಯನ್ನು ವಾಣಿಜ್ಯೀಕರಿಸಲು ‘ತಂತ್ರಜ್ಞಾನ ವರ್ಗಾವಣೆ’ ಕೈಗೊಳ್ಳಲು ಅರ್ಹ ಸಂಸ್ಥೆಗಳು ಮತ್ತು ತಯಾರಕರನ್ನು ಆಹ್ವಾನಿಸುವ ಆಸಕ್ತಿಯ ಅಭಿವ್ಯಕ್ತಿ (EoI) ಅನ್ನು ಬಿಡುಗಡೆ ಮಾಡಿದೆ.