ಹೈದರಾಬಾದ್: ಶಾಪ್ನಲ್ಲಿ ವಿಸ್ಕಿ ಮಿಶ್ರಿತ ಐಸ್ ಕ್ರೀಂ ಮಾರಾಟ ಮಾಡುತ್ತಿರುವುದು ಹೈದರಾಬಾದ್ನ ಜುಬಿಲಿಹಿಲ್ಸ್ನ ರೋಡ್ ನಂಬರ್ 1ರಲ್ಲಿರುವ ಹಾರಿಕ ಕೆಫೆ ಐಸ್ ಕೀಂ ಶಾಪ್ನಲ್ಲಿ ಈ ಘಟನೆ ನಡೆದಿದೆ.
ಐಸ್ ಕ್ರೀಂ ಶಾಪ್ನ ಮಾಲೀಕರಾದ ದಯಕರ್ ರೆಡ್ಡಿ, ಸೋಭಾನ್ ಎನ್ನುವ ಆರೋಪಿಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಆದರೆ ಈ ಶಾಪ್ ಅನ್ನು ಬೇರೆಯೊಬ್ಬ ವ್ಯಕ್ತಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇವರು ಶಾಪ್ನಲ್ಲಿ 1 ಕೆ.ಜಿ ಐಸ್ ಕ್ರೀಂಗೆ 60 ಎಂ.ಎಲ್ ವಿಸ್ಕಿ ಮಿಕ್ಸ್ ಮಾಡಿ ಬಳಿಕ ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಐಸ್ ಕ್ರೀಂನಲ್ಲಿ ವಿಸ್ಕಿ ಮಿಕ್ಸ್ ಮಾಡಿ ಮಾರಾಟ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಶಾಪ್ನಲ್ಲಿ ವಿಸ್ಕಿ ಮಿಶ್ರಿತ ಐಸ್ ಕ್ರೀಂನ ಬಾಕ್ಸ್ಗಳನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು 11.50 ಕೆ.ಜಿ ವಿಸ್ಕಿ ಮಿಶ್ರಿತ ಐಸ್ ಕ್ರೀಂ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಐಸ್ ಕ್ರೀಂ ತಯಾರು ಮಾಡುತ್ತಿದ್ದ ಮಿಷನ್ ಸೇರಿದಂತೆ ಶಾಪ್ನಲ್ಲಿದ್ದ ಇತರೆ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

