ಗುಜರಾತ್‌:  ಪತಿಯನ್ನು ತ್ಯಜಿಸಿ ಗ್ಯಾಂಗ್​ಸ್ಟರ್​ನನ್ನು ಪ್ರೀತಿಸಿ ಓಡಿಹೋಗಿದ್ದ ಐಎಎಸ್​ ಅಧಿಕಾರಿ ಪತ್ನಿ ಮನೆಗೆ ಮರಳಿದ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಗ್ಯಾಂಗ್​ಸ್ಟರ್​ ಜತೆ ಓಡಿ ಹೋಗಿದ್ದ ಸೂರ್ಯ ಜೈ ಮಹಿಳೆ 9 ತಿಂಗಳ ಬಳಿಕ ಹಿಂದಿರುಗಿದ್ದ ಆಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೆ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.

ಪತಿ ರಂಜಿತ್ ಕುಮಾರ್ ತನ್ನ ಮನೆಯ ಸಿಬ್ಬಂದಿಗೆ ತನ್ನ ಹೆಂಡತಿಯನ್ನು ಮನೆಗೆ ಪ್ರವೇಶಿಸಲು ಬಿಡಬೇಡಿ ಎಂದು ಹೇಳಿದ್ದರು. ಪೊಲೀಸರ ಪ್ರಕಾರ, ಮಹಿಳೆ ಮಕ್ಕಳ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದಾಳೆ.ಮನೆಯೊಳಗೆ ಹೋಗಲು ಬಿಡದಿದ್ದಕ್ಕೆ ಮನನೊಂದ ಪತ್ನಿ ವಿಷ ಸೇವಿಸಿ ಆಂಬ್ಯುಲೆನ್ಸ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ್ದಾರೆ.