ನವದೆಹಲಿ: ನೂತನ ಸಂಸದೆ, ಬಾಲಿವುಡ್ ತಾರೆ ಕಂಗನಾ ರಣಾವತ್ ಇದೀಗ ಮತ್ತೊಂದು ಸಂಕಟ ಎದುರಾಗಿದೆ. ಈಗಾಗಲೇ ಸಿಐಎಸ್ಎಫ್ ಮಹಿಳಾ ಸೆಕ್ಯುರಿಟಿ ಸಿಬ್ಬಂದಿಯೊಬ್ಬರಿಂದ ಹೊಡೆಸಿಕೊಂಡಿರುವುದು ಭಾರಿ ಸುದ್ಧಿಯಾಗಿತ್ತು, ಇದೀಗ ಮತ್ತೊಂದು ವಿಚಾರಕ್ಕೆ ಹೈಕೋರ್ಟ್ ಕಂಗನಾಗೆ ನೋಟಿಸ್ ನೀಡಿದೆ.
ಕಂಗನಾ ರಣಾವತ್ ವಿರುದ್ಧ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿರುವವರು ಮಂಡಿ ಕ್ಷೇತ್ರದ ಲೋಕಸಭಾ ಚುನಾವಣಾ ಆಕಾಂಕ್ಷಿಯಾಗಿದ್ದ ಕಿನ್ನೌರ್ ನಿವಾಸಿ ಲಾಯಿಕ್ ರಾಮ್ ನೇಗಿ. ಕಂಗನಾ ಆಯ್ಕೆಯನ್ನೇ ಇವರು ಪ್ರಶ್ನೆ ಮಾಡಿದ್ದಾರೆ. ಕಂಗನಾ ಅವರನ್ನು ಸಂಸದ ಸ್ಥಾನದಿಂದ ವಜಾಗೊಳಿಸುವಂತೆ ಅವರು ಕೋರಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಂಗನಾ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ 74,755 ಮತಗಳ ಅಂತರದಿಂದ ಗೆದ್ದಿದ್ದಾರೆ. ಲಾಯಿಕ್ ಅವರ ಪ್ರಕಾರ, ಕಂಗನಾ ಗೆಲ್ಲದಿದ್ದರೆ ತಾವು ಗೆಲುವು ಸಾಧಿಸುತ್ತಿದ್ದೆವು ಎನ್ನುವುದು.
ಚುನಾವಣೆ ವೇಳೆ ತಮ್ಮ ನಾಮಪತ್ರವನ್ನು ಚುನಾವಣಾ ಅಧಿಕಾರಿ (ಮಂಡಿಯ ಜಿಲ್ಲಾಧಿಕಾರಿ) ಅನ್ಯಾಯವಾಗಿ ತಿರಸ್ಕರಿಸಿದ್ದರು ಎನ್ನುವುದು. ಅವರು ಕೊನೆಯ ಕ್ಷಣದಲ್ಲಿ ತಮಗೆ ಈ ಸೂಚನೆ ನೀಡಲಾಗಿದ್ದ ಕಾರಣ, ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗಲಿಲ್ಲ. ಇಲ್ಲದಿದ್ದರೆ ಕಂಗನಾ ಬದಲು ನಾನೇ ಚುನಾವಣೆ ಗೆಲ್ಲುತ್ತಿದ್ದೆ ಎಂದು ನೇಗಿ ಹೇಳಿದ್ದಾರೆ. . ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಜ್ಯೋತ್ಸ್ನಾ ರೇವಾಲ್ ಅವರು ಆಗಸ್ಟ್ 21 ರೊಳಗೆ ಉತ್ತರ ನೀಡುವಂತೆ ಪ್ರತಿವಾದಿಯಾಗಿರುವ ಸಂಸದೆ ಕಂಗನಾ ರಣಾವತ್ ಅವರಿಗೆ ಸೂಚಿಸಿದ್ದಾರೆ.

