ನವದೆಹಲಿ:  ಲೆಬನ್‌ನಾದ್ಯಂತ ಸಂಭವಿಸಿರುವ ಪೇಜರ್‌ಗಳ ಸ್ಫೋಟ ವಿಚಾರವಾಗಿ ಇಸ್ರೇಲ್ ವಿರುದ್ಧ ಕಿಡಿಕಾರಿರುವ ಇರಾನ್ ಬೆಂಬಲಿತ ಹೆಜ್ಬೊಲ್ಲಾ ಮಂಗಳವಾರ ಇಸ್ರೇಲ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದೆ.

ಪೇಜರ್ ಸ್ಫೋಟ ಪ್ರಕರಣದಲ್ಲಿ ಈ ವರೆಗೂ ಕನಿಷ್ಠ 9 ಮಂದಿ ಸಾವಿಗೀಡಾಗಿ ಸುಮಾರು 2,800 ಜನರು ಗಾಯಗೊಂಡಿದ್ದಾರೆ ಮತ್ತು ಈ ಪೈಕಿ ಸುಮಾರು 200 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಗಾಯಾಳುಗಳಿಗೆ ಹೆಚ್ಚಾಗಿ ಮುಖ, ಕೈಗಳು ಮತ್ತು ಹೊಟ್ಟೆಗೆ ಗಾಯಗಳಾಗಿವೆ ಎಂದು ಲೆಬನಾನಿನ ಆರೋಗ್ಯ ಸಚಿವ ಫಿರಾಸ್ ಅಬಿಯಾಡ್ ಹೇಳಿದ್ದಾರೆ.

ಇಸ್ರೇಲಿ ಶತ್ರುವನ್ನು “ಈ ಕ್ರಿಮಿನಲ್ ಆಕ್ರಮಣಕ್ಕೆ ಸಂಪೂರ್ಣ ಹೊಣೆಗಾರ”ನನ್ನಾಗಿ ಮಾಡಲಾಗುತ್ತದೆ. ಇಸ್ರೇಲ್ “ಈ ಪಾಪದ ಆಕ್ರಮಣಕ್ಕಾಗಿ ಖಂಡಿತವಾಗಿಯೂ ತನ್ನ ನ್ಯಾಯಯುತ ಶಿಕ್ಷೆಯನ್ನು ಪಡೆಯುತ್ತದೆ” ಎಂದು ಹೆಜ್ಬುಲ್ಲಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

A series of pager explosions resulted in a mass-casualty event, killing and critically wounding several operatives across Lebanon and Syria.… pic.twitter.com/PKVRaa8swg

— Brother Mikey (@BrotherMikeyX) September 17, 2024