ನವದಹಲಿ: ಜುಲೈ 2ರಂದು ನಡೆದ, ಸುಮಾರು 121 ಜನರನ್ನು ಬಲಿ ಪಡೆದ ಉತ್ತರ ಪ್ರದೇಶದ ಹತ್ರಾಸ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿದ್ದ ಮುಖ್ಯ ಆರೋಪಿ ದೇವಪ್ರಕಾಶ್ ಮಧುಕರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ʼʼದೆಹಲಿಯಲ್ಲಿದ್ದ ದೇವಪ್ರಕಾಶ್ ಮಧುಕರ್ ಶರಣಾಗಿದ್ದು, ಉತ್ತರ ಪ್ರದೇಶ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆʼʼ ಎಂದು ಅವರ ವಕೀಲ ಎ.ಪಿ.ಸಿಂಗ್ ತಿಳಿಸಿದ್ದಾರೆ.
ಇನ್ನು ಈ ಕಾಲ್ತುಳಿತಕ್ಕೆ ಮುಖ್ಯ ಕಾರಣವಾಗಿರುವ ಭೋಲೆ ಬಾಬಾ ಅವರ ಸತ್ಯಂಗದ ಮುಖ್ಯ ಸೇವಾದಾರ ಮಧುಕರ್ ವಿರುದ್ಧ ಹತ್ರಾಸ್‌ನ ಸಿಕಂದ್ರ ರಾವ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮಧುಕರ್‌ನ ವಕೀಲ ಎ.ಪಿ.ಸಿಂಗ್ ವಿಡಿಯೊ ಸಂದೇಶದಲ್ಲಿ, ʼʼತಮ್ಮ ಕಕ್ಷಿದಾರ (ದೇವಪ್ರಕಾಶ್ ಮಧುಕರ್) ದೆಹಲಿಯಲ್ಲಿ ಶರಣಾಗಿದ್ದಾರೆ. ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರುʼʼ ಎಂದು ಹೇಳಿದ್ದಾರೆ.

