ನವದೆಹಲಿ: ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ ಹಾಲಿನ ಉತ್ಪಾದಕಗಳನ್ನು ಮಾರುವ ಕಂಪನಿಗಳಿಗೆ ಖಡಕ್ ಎಚ್ಚರಿಕೆ ನೀಡಿದೆ.

ಹಾಲು ಉತ್ಪಾದಕ ಕಂಪನಿಗಳು ಇತ್ತೀಚೆಗೆ ತಮ್ಮ ಉತ್ಪನ್ನಗಳಿಗೆ ಹಾಲು, ತುಪ್ಪ, ಬೆಣ್ಣೆ ಇವುಗಳಿಗೆ FSSAI ಹೆಸರಿನಲ್ಲಿ ಎ1 ಗುಣಮಟ್ಟದ ಉತ್ಪನ್ನ, ಎ2 ಗುಣಮಟ್ಟದ ಉತ್ಪನ್ನ ಎಂದು ಲೇಬಲ್ ಅಂಟಿಸಿ ಗ್ರಾಹಕರ ದಾರಿ ತಪ್ಪಿಸುತ್ತಿವೆ. ಈ ಕಾರಣದಿಂದಾಗಿ ಡೈರಿ ಉತ್ಪನ್ನಗಳನ್ನು ಮಾಡುವ ಕಂಪನಿಗಳಿಗೆ FSSAI ಒಂದು ಸೂಚನೆ ನೀಡಿದೆ.

ಆ ಎ1 ಎ2 ಅನ್ನೋ ಗುಣಮಟ್ಟ ಎಂದರೇನು ಸ್ಪಷ್ಟನೆ ನೀಡಿ. ಕೂಡಲೇ ಆ ಲೇಬಲ್​ಗಳನ್ನು ತೆಗೆಯಿರಿ ಎಂದು ಖಡಕ್ ಸೂಚನೆ ನೀಡಿದೆ. ಕೇಲವ ಹಾಲಿನ ಉತ್ಪನ್ನಗಳ ಕಂಪನಿಗೆ ಮಾತ್ರವಲ್ಲ, ಎಲ್ಲ ಎಫ್​ಬಿಓ ಕಂಪನಿಗಳು ಇದೇ ನಿರ್ದೇಶನ ನೀಡಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಇದು ಕೇವಲ ಗ್ರಾಹಕರನ್ನು ದಾರಿ ತಪ್ಪಿಸುವ ಮಾರ್ಗ ಮಾತ್ರವಲ್ಲ FSSAI ನಿಯಮದ ಉಲ್ಲಂಘನೆ ಕೂಡ ಹೌದು ಎಂದು ಹೇಳಿದೆ.

ಎ1 ಎ2 ಹಾಲುಗಳು ಬೆಟಾ ಕೇಸಿಯನ್ ಅನ್ನೋ ಪೌಷ್ಠಿಕಾಂಶದ ಆಧಾರದ ಮೇಲೆ ನಿರ್ಣಯಿಸಲಾಗುತ್ತದೆ. ಇದು ಗ್ರಾಹಕರನ್ನು ಗೊಂದಲಕ್ಕೆ ದೂಡುತ್ತದೆ. ಈ ರೀತಿ ಲೇಬಲ್ ಅಂಟಿಸಿ ಮಾರುವುದನ್ನು ಮೊದಲು ಎಲ್ಲಾ ಕಂಪನಿಗಳು ಕೈಬಿಡಬೇಕು ಎಂದು ಖಡಕ್ ಸೂಚಿಸಿದೆ.