ಲಕ್ನೋ: ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ರೊಬ್ಬರು ನ್ಯಾಯಾಧೀಶರು ಕಿರುಕುಳ ನೀಡಿದ್ದಾರೆ ಎಂದು ಮನನೊಂದು ರೈಲ್ವೆ ಹಳಿ ಮೇಲೆ ಕುಳಿತು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ.

ಬನ್ನಾದೇವಿ ಪೊಲೀಸ್ ಠಾಣೆಯಲ್ಲಿ ನಿಯೋಜನೆಗೊಂಡಿರುವ ಸಚಿನ್ ಕುಮಾರ್ ಆತ್ಮಹತ್ಯೆಗೆ ಯತ್ನಿಸಿ ಪೊಲೀಸ್‌. ರಿಮಾಂಡ್ ಮ್ಯಾಜಿಸ್ಟ್ರೇಟ್ ಅಭಿಷೇಕ್ ತ್ರಿಪಾಠಿ ಅವರು ಕಿರುಕುಳ ನೀಡಿದ್ದಾರೆ ಎಂದು ಹೇಳಿದ್ದಾರೆ. ಸಚಿನ್‌ ಕುಮಾರ್‌ ವಶಪಡಿಸಿಕೊಂಡ 7 ಬೈಕ್‌ಗಳ ಜೊತೆಗೆ ಐವರು ಬೈಕ್ ಕಳ್ಳರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಸಂಜೆ 5 ಗಂಟೆಗೆ ಬಂದ ನ್ಯಾಯಾಧೀಶರು ನಕಲಿ ಶಂಕಿತರನ್ನು ಕರೆತಂದಿದ್ದಾರೆ ಎಂದು ಆರೋಪಿಸಿ ರಾತ್ರಿ 10 ಗಂಟೆಯವರೆಗೆ ನ್ಯಾಯಾಲಯದಲ್ಲಿ ಇರಿಸಿದ್ದರು. ಅಷ್ಟೇ ಅಲ್ಲದೇ ನ್ಯಾಯಾಧೀಶರು ಪದೇ ಪದೇ ಗದರಿಸುತ್ತಿದ್ದರು ಎಂದೂ ಸಚಿನ್‌ ಆರೋಪಿಸಿದ್ದಾರೆ. ಆರೋಪಗಳು ಮತ್ತು ಬೆದರಿಕೆಗಳಿಂದ ಬೇಸರಗೊಂಡ ಸಚಿನ್‌ ಕುಮಾರ್ ಆತ್ಮಹತ್ಯೆ ಮಾಡಿಕೊಳ್ಳಲು ರೈಲ್ವೆ ಹಳಿಗೆ ಹೋಗಿದ್ದಾರೆ. ಆದರೆ ರೈಲು ಬರುವ ಮೊದಲು ಅವರ ಸಹೋದ್ಯೋಗಿಗಳು ಸಚಿನ್‌ ಕುಮಾರ್‌ರನ್ನು ರಕ್ಷಿಸಿದರು.

https://x.com/SachinGuptaUP/status/1835966469630263595?