ನವದೆಹಲಿ : ಆಲಿಕಲ್ಲು ಹೊಡೆತಕ್ಕೆ ವಿಮಾನದ ಮುಂಭಾಗ ತೀವ್ರ ಹಾನಿಯಾಗಿದ್ದು, ಕೂದಲೆಳೆ ಅಂತರದಲ್ಲಿ 227 ಪ್ರಯಾಣಿಕರು ಪಾರಾಗಿರುವ ಘಟನೆ ದೆಹಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ 6E2142 ವಿಮಾನವು ಮಂಗಳವಾರ ಸಂಜೆ ತೀವ್ರ ಹವಾಮಾನ ಪ್ರಕ್ಷುಬ್ಧತೆಯಿಂದ ನಡೆಯಿತು.
ಕೂಡಲೇ ಎಚ್ಚೆತ್ತ ಪೈಲಟ್ ವಾಯು ಸಂಚಾರ ನಿಯಂತ್ರಣದೊಂದಿಗೆ ಎಮರ್ಜೆನ್ಸಿ ಘೋಷಿಸಿದರು. ವಾಯು ಸಂಚಾರ ನಿಯಂತ್ರಣವು ಎಮರ್ಜೆನ್ಸಿ ಘೋಷಿಸಿದರು. ಆದರೆ ಅಷ್ಟರಲ್ಲಿ ಮಳೆ ಹಾಗೂ ಆಲಿಕಲ್ಲಿನ ಅಬ್ಬರ ಹೆಚ್ಚಾಗಿ ವಿಮಾನ ಒಂದು ಕ್ಷಣ ಅಲುಗಾಡಿತು. ಅಲ್ಲದೇ ಅಲಿಕಲ್ಲಿನ ಹೊಡೆತಕ್ಕೆ ವಿಮಾನದ ಮುಂಭಾಗಕ್ಕೆ ತೀರ್ವ ಹಾನಿ ಉಂಟಾಯಿತು.
ವಿಮಾನ ಅಲುಗಾಡುತ್ತಿದ್ದಂತೆ ಪ್ರಯಾಣಿಕರೆಲ್ಲಾ ಕಕ್ಕಾಬಿಕ್ಕಿಯಾಗಿ ಕಿರುಚಾಡಲು ಆರಂಭಿಸಿದರು. ಪೈಲಟ್ ನ ಸಮಯಪ್ರಜ್ಞೆ ಹಾಗೂ ಚಾಕಚಕ್ಯತೆಯಿಂದ ಸಂಜೆ 6.30ಕ್ಕೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ.

