ವ್ಯಾಂಕೋವರ್‌: ಕೆನಡಾದ ವ್ಯಾಂಕೋವರ್‌ನಲ್ಲಿರುವ ಪಂಜಾಬಿ ಗಾಯಕ ಎಪಿ ಧಿಲ್ಲೋನ್ ಅವರ ಮನೆಯ ಹೊರಗೆ ಇಂದು ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಮತ್ತು ಗ್ಯಾಂಗ್​​ಸ್ಟರ್ ರೋಹಿತ್ ಗೋಡಾರಾ ಗುಂಡಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ.

ನಗರದ ವಿಕ್ಟೋರಿಯಾ ದ್ವೀಪ ಪ್ರದೇಶದ ಧಿಲ್ಲೋನ್ ಅವರ ಮನೆಯ ಬಳಿ ಗುಂಡಿನ ಸದ್ದು ಕೇಳಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶಗಳ ಪ್ರಕಾರ ಬಿಷ್ಣೋಯ್-ಗೋದಾರ ಗ್ಯಾಂಗ್ ಕೆನಡಾದ ವಿಕ್ಟೋರಿಯಾ ದ್ವೀಪ ಮತ್ತು ಟೊರೊಂಟೊದ ವುಡ್‌ಬ್ರಿಡ್ಜ್‌ನಲ್ಲಿ ಗುಂಡಿನ ದಾಳಿ ನಡೆಸಿದೆ ಎಂದು ಹೇಳಿಕೊಂಡಿದೆ.

ನಟ ಸಲ್ಮಾನ್ ಖಾನ್‌ ಜತೆ ಧಿಲ್ಲೋನ್ ಸಂಪರ್ಕ ಹೊಂದಿದ್ದಾರೆ ಎಂದು ಗ್ಯಾಂಗ್​​ಸ್ಟರ್​​ಗಳು “ನೀವು ನಿಮ್ಮ ಮಿತಿಯಲ್ಲಿ ಇರಿ, ಇಲ್ಲದಿದ್ದರೆ ನಾಯಿಯಂತೆ ಸಾಯಿಸಲಾಗುತ್ತದೆ ” ಎಂದು ಎಚ್ಚರಿಸಿದ್ದಾರೆ ಎಂದು ವರದಿ ಹೇಳಿದೆ.