ಶ್ರೀನಗರ: ಕೇರನ್ ಗಡಿ ನಿಯಂತ್ರಣ ರೇಖೆ ಬಳಿ ಯೋಧರು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ಒಬ್ಬ ಯೋಧ ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ.
ಜಡ್ಡಾನ ಬಾಟಾ ಗ್ರಾಮದಲ್ಲಿ ಉಗ್ರರು ಬೀಡು ಬಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸೇನೆಗೆ ಬೆಳ್ಳಂ ಬೆಳಗ್ಗೆ 2ಗಂಟೆಗೆ ಸೇನೆ ಕಾರ್ಯಾಚರಣೆ ಕೈಗೆತ್ತಿಕೊಂಡಿತ್ತು. ಶೋಧ ಕಾರ್ಯದ ವೇಳೆ ಸರ್ಕಾರಿ ಶಾಲೆಯೊಳಗಿನ ತಾತ್ಕಾಲಿಕ ಭದ್ರತಾ ಶಿಬಿರದ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಯೋಧರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಬಗ್ಗೆ ಜಮ್ಮುವಿನ ರಕ್ಷಣಾ ಇಲಾಖೆ ಪಿಆರ್‌ಒ ಪ್ರತಿಕ್ರಿಯಿಸಿದ್ದು, ಉಧಂಪುರದ ಏರ್ ಫೋರ್ಸ್ ಸ್ಟೇಷನ್‌ನಿಂದ ಎಎಲ್‌ಹೆಚ್‌ನ ತ್ವರಿತ ಕ್ರಮವು ದೋಡಾದಲ್ಲಿ ತೀವ್ರವಾಗಿ ಗಾಯಗೊಂಡ ಸೈನಿಕನ ಜೀವವನ್ನು ಉಳಿಸಿದೆ. ಸವಾಲಿನ ಹವಾಮಾನದ ಹೊರತಾಗಿಯೂ, ಉಧಮ್‌ಪುರದ ಕಮಾಂಡ್ ಆಸ್ಪತ್ರೆಯಲ್ಲಿ ಸಕಾಲಿಕ ವೈದ್ಯಕೀಯ ಆರೈಕೆಯನ್ನು ಖಾತರಿಪಡಿಸುವ ಮೂಲಕ ಸ್ಥಳಾಂತರಿಸುವಿಕೆ ಯಶಸ್ವಿಯಾಗಿದೆ. ಅವರ ಸಮರ್ಪಣೆ ಮತ್ತು ಶೌರ್ಯಕ್ಕಾಗಿ ತಂಡಕ್ಕೆ ಅಭಿನಂದನೆಗಳು ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

