ನವದೆಹಲಿ : ಕೇಂದ್ರ ಸರ್ಕಾರ ಆಹಾರ ಉತ್ಪನ್ನಗಳ ಮೇಲಿನ ಜಿಎಸ್ಟಿ ದರ ಇಳಿಸಿದ್ದು, 400 ಕ್ಕೂ ಹೆಚ್ಚು ದಿನನಿತ್ಯ ಬಳಕೆ ವಸ್ತುಗಳ ಬೆಲೆ ಕಡಿಮೆಯಾಗಲಿದೆ. ಸೆಪ್ಟೆಂಬರ್ 22 ನಾಳೆಯಿಂದಲೇ ಹೊಸ ದರ ಅನ್ವಯವಾಗಲಿದೆ.
ಇನ್ಮುಂದೆ ಹಾಲು, ತುಪ್ಪ, ಬೆಣ್ಣೆ, ಚೀಸ್, ಬ್ರೆಡ್, ಚಪಾತಿ, ತಿಂಡಿಗಳು, ಪಾಸ್ತಾ, ನೂಡಲ್ಸ್, ಸಾಸ್‌ಗಳು, ಚಹಾ, ಕಾಫಿ ಮತ್ತು ಮಸಾಲೆಗಳು ಮೊದಲಿಗಿಂತ ಅಗ್ಗವಾಗುತ್ತವೆ. ಅಲ್ಲದೆ ಉಕ್ಕಿನ ಪಾತ್ರೆಗಳು, ಮಣ್ಣಿನ ಪಾತ್ರೆಗಳು, ಮರದ ಮತ್ತು ಬಿದಿರಿನ ಪೀಠೋಪಕರಣಗಳು ಮತ್ತು ಬೆಂಕಿಕಡ್ಡಿಗಳು ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತದೆ. ಸರಿಸುಮಾರು 400 ವಸ್ತುಗಳ ಮೇಲಿನ ಜಿಎಸ್‌ಟಿ ದರಗಳನ್ನು ಕಡಿಮೆ ಮಾಡಲಾಗಿದೆ.

