ಜೈಪುರ: ರಾಜಸ್ಥಾನದ ಆಲ್ವಾರ್ ಯಾರ್ಡ್‌ನಲ್ಲಿ ಇಂದು (ಜುಲೈ.೨೧) ಮುಂಜಾನೆ ಗೂಡ್ಸ್ ರೈಲಿನ ಮೂರು ಬೋಗಿಗಳು ಹಳಿ ತಪ್ಪಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಬೆಳಗಿನ ಜಾವ 2.30ಕ್ಕೆ ಘಟನೆ ನಡೆದಿದೆ. ಯಾರ್ಡ್‌ನ ಒಂದು ಬದಿಯಲ್ಲಿ ಘಟನೆ ನಡೆದಿದ್ದು, ಹಳಿಯಲ್ಲಿ ಬೇರೆ ಯಾವುದೇ ರೈಲುಗಳ ಓಡಾಟವಿರಲ್ಲಿಲ್ಲ. ಹೀಗಾಗಿ ಸಂಚಾರಕ್ಕೆ ಯಾವುದೇ ತೊಂದರೆಯುಂಟಾಗಿಲ್ಲ ಎಂದು ವಾಯವ್ಯ ರೈಲ್ವೆಯ ಸಿಪಿಆರ್‌ಒ ತಿಳಿಸಿದ್ದಾರೆ. ಇಂದು (ಜುಲೈ.೨೧) ಬೆಳಿಗ್ಗೆ 9 ಗಂಟೆಗೆ ಹಳಿಯಲ್ಲಿದ್ದ ಬೋಗಿಗಳನ್ನು ತೆರವುಗೊಳಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ‌