ನವದೆಹಲಿ: ಅಮೆರಿಕ-ಇರಾನ್-ಇಸ್ರೇಲ್ ಸಂಘರ್ಷ ಮುಂದುವರಿದಿರುವ ಹಿನ್ನೆಲೆಯಲ್ಲಿ ಸೋಮವಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಸ್ವಲ್ಪ ಇಳಿಕೆಯಾಗಿದೆ.
ಚಿನ್ನವು 0.5% ದಷ್ಟು ಮತ್ತು ಬೆಳ್ಳಿ 3.3% ದಷ್ಟು ಕುಸಿದಿದ್ದು, ಹೂಡಿಕೆದಾರರು ಎಚ್ಚರಿಕೆಯ ವಹಿವಾಟು ನಡೆಸುತ್ತಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ ಸುಮಾರು $5,000 ವಹಿವಾಟು ನಡೆಸಿದೆ.
ಮಾರುಕಟ್ಟೆ ಮಾಹಿತಿಯ ಪ್ರಕಾರ, ಸೋಮವಾರ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,58,800 ರೂ.ಗಳಷ್ಟಿತ್ತು. ಕೊಲ್ಕತ್ತಾದಲ್ಲಿ ಚಿನ್ನದ ಬೆಲೆ 1,58,580 ರೂ.ಗಳಷ್ಟಿತ್ತು. ಮುಂಬೈನಲ್ಲಿ ಬೆಳ್ಳಿ ಬೆಲೆ ಕೆಜಿಗೆ 2,59,240 ರೂ. ಇತ್ತು. ಇರಾನ್‌ನ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಅಮೆರಿಕ ದಾಳಿ ನಡೆಸಿದ ನಂತರ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದರಿಂದ ಚಿನ್ನದ ಬೆಲೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತ ಕಂಡುಬಂದಿದ್ದು, ಕೆಜಿಗೆ ₹10,000 ರಿಂದ ₹20,000 ವರೆಗೆ ಇಳಿಕೆಯಾಗಿದೆ.

