ನವದೆಹಲಿ: ಸೆಂಟ್ರಲ್ ಬ್ಯಾಂಕ್ ಒಲಿಂಪಿಕ್ಸ್ನಲ್ಲಿ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸತತ ಎರಡನೇ ಬಾರಿ ಚಿನ್ನದ ಪದಕ ಜಯಿಸಿದ್ದಾರೆ. ಸೆಂಟ್ರಲ್ ಬ್ಯಾಂಕುಗಳನ್ನು ಹೇಗೆ ನಿರ್ವಹಣೆ ಮಾಡಲಾಗುತ್ತಿದೆ ಎನ್ನುವುದರ ಆಧಾರದ ಮೇಲೆ ಅವುಗಳ ಮುಖ್ಯಸ್ಥರಿಗೆ ಎ+ ನಿಂದ ಹಿಡಿದು ಎಫ್ವರೆಗೆ ರೇಟಿಂಗ್ ಕೊಡಲಾಗುತ್ತದೆ. ಗ್ಲೋಬಲ್ ಫೈನಾನ್ಸ್ ಮ್ಯಾಗಝಿನ್ 1994ರಿಂದ ವಾರ್ಷಿಕವಾಗಿ ಪ್ರಕಟಿಸುವ ಸೆಂಟ್ರಲ್ ಬ್ಯಾಂಕರ್ ರಿಪೋರ್ಟ್ ಕಾರ್ಡ್ಸ್ನ ಈ ವರ್ಷದ ವರದಿಯಲ್ಲಿ ಶಕ್ತಿಕಾಂತ ದಾಸ್ ಅವರಿಗೆ ಎ+ ರೇಟಿಂಗ್ ಮತ್ತು ಮತ್ತೊಮ್ಮ ಚಿನ್ನದ ಪದಕ ಸಿಕ್ಕಿದೆ.
ಇನ್ನು ಈ ಸುದ್ಧಿಯನ್ನು ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಆರ್ಬಿಐ ಹಂಚಿಕೊಂಡಿದ್ದು ಪ್ರಧಾನಿ ನರೇಂದ್ರ ಮೋದಿ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.ಆರ್ಥಿಕ ಪ್ರಗತಿ ಮತ್ತು ಸ್ಥಿರತೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಅವರು ಮಾಡಿರುವ ಕೆಲಸಕ್ಕೆ ಮತ್ತು ಆರ್ಬಿಐನಲ್ಲಿನ ಅವರ ನಾಯಕತ್ವಕ್ಕೆ ಇದು ಸಿಕ್ಕ ಮನ್ನಣೆಯಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
Congratulations to RBI Governor Shri @DasShaktikanta for this feat, and that too for the second time. This is a recognition of his leadership at the RBI and his work towards ensuring economic growth and stability. https://t.co/lzfogAQb15
— Narendra Modi (@narendramodi) August 21, 2024

