ದೆಹಲಿ: ಪದವಿ ಪಡೆಯುವುದರಿಂದ ಏನೂ ಪ್ರಯೋಜನವಿಲ್ಲ, ವಿದ್ಯಾರ್ಥಿಗಳು ಜೀವನೋಪಾಯಕ್ಕಾಗಿ ಮೋಟಾರ್ ಸೈಕಲ್ ಪಂಕ್ಚರ್ ರಿಪೇರಿ ಅಂಗಡಿಯನ್ನು ತೆರೆಯಬೇಕು ಎಂದು ಮಧ್ಯಪ್ರದೇಶದ ಬಿಜೆಪಿ ಶಾಸಕ ಪನ್ನಾಲಾಲ್ ಶಾಕ್ಯ ಹೇಳಿದರು.
ಅವರು ಗುನಾ ವಿಧಾನಸಭಾ ಕ್ಷೇತ್ರದಲ್ಲಿ ‘ಪಿಎಂ ಕಾಲೇಜ್ ಆಫ್ ಎಕ್ಸಲೆನ್ಸ್’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ನಾವು ಇಂದು ಪಿಎಂ ಕಾಲೇಜ್ ಆಫ್ ಎಕ್ಸಲೆನ್ಸ್ ಅನ್ನು ತೆರೆಯುತ್ತಿದ್ದೇವೆ.
ಈ ಕಾಲೇಜು ಪದವಿಗಳಿಂದ ಏನೂ ಆಗುವುದಿಲ್ಲ ಎಂಬ ಒಂದು ವಾಕ್ಯವನ್ನು ಮನಸ್ಸಿನಲ್ಲಿಟ್ಟುಕೊಳ್ಳಲು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ಬದಲಿಗೆ ಕನಿಷ್ಠ ಜೀವನೋಪಾಯಕ್ಕಾಗಿ ಮೋಟಾರ್ ಸೈಕಲ್ ಪಂಕ್ಚರ್ ರಿಪೇರಿ ಅಂಗಡಿಯನ್ನು ತೆರೆಯಿರಿ ಎಂದು ಬಿಜೆಪಿ ಶಾಸಕರು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

