ಉತ್ತರಪ್ರದೇಶ : ನಕಲಿ ನೋಟು ಮುದ್ರಣಕ್ಕೆ ಸಂಬಂಧಿಸಿದಂತೆ ಬಂದ ಮಾಹಿತಿ ಮೇರೆಗೆ ಮದರಸಾಗೆ ಶೋಧಕ್ಕೆಂದು ಹೋಗಿದ್ದ ಅಧಿಕಾರಿಗಳಿಗೆ ಆರ್​ಎಸ್​ಎಸ್​ ಕುರಿತ ವಿವಾದಾತ್ಮಕ ಪುಸ್ತಕ ಸಿಕ್ಕಿದೆ. ಈ ಪುಸ್ತಕ ಭಯೋತ್ಪಾದಕ ಸಂಘಟನೆಯೊಂದಿಗೆ ಹೋಲಿಸುವ ಪುಸ್ತಕವಾಗಿದೆ ಇದನ್ನು ಪ್ರಯಾಗರಾಜ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಿದ್ಯಾರ್ಥಿಗಳಲ್ಲಿ “ಆರ್‌ಎಸ್‌ಎಸ್ ವಿರೋಧಿ ಭಾವನೆಗಳನ್ನು ಹುಟ್ಟುಹಾಕಲು” ಧರ್ಮಗುರು ಅದನ್ನು ಬಳಸುತ್ತಿದ್ದರು ಎಂದು ಶಂಕಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರ್​ಎಸ್​ಎಸ್​ ದಿ ಬಿಗ್ಗೆಸ್ಟ್ ಟೆರರಿಸ್ಟ್​ ಆರ್ಗನೈಸೇಷನ್ ಇನ್​ ದಿ ಕಂಟ್ರಿ ಎನ್ನುವ ಪುಸ್ತಕವನ್ನು ಉರ್ದುವಿನಿಂದ ಹಿಂದಿಗೆ ತರ್ಜುಮೆ ಮಾಡಲಾಗಿದೆ. ಈ ಪುಸ್ತಕವನ್ನು ಎಸ್​ಎಂ ಮುಷರಫ್​ ಎಂಬುವವರು ಬರೆದಿದ್ದಾರೆ. ಮದರಸಾದ ಧರ್ಮಗುರು ಮೊಹಮ್ಮದ್ ತಫ್ಸೀರುಲ್ ಆರಿಫೀನ್ ಪುಸ್ತಕವನ್ನು ಮಕ್ಕಳ ಮನಸ್ಸಿನಲ್ಲಿ ಆರ್‌ಎಸ್‌ಎಸ್ ವಿರೋಧಿ ಭಾವನೆಗಳನ್ನು ಬಿಟ್ಟಲು ಬಳಸುತ್ತಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ಥಳೀಯ ಗುಪ್ತಚರ ಘಟಕ ಮತ್ತು ಭಯೋತ್ಪಾದನಾ ನಿಗ್ರಹ ದಳ ತಂಡಗಳು ಮಂಗಳವಾರ ಮದ್ರಸಾ ಸಿಬಂದಿಗಳನ್ನು ವಿಚಾರಣೆ ನಡೆಸಿವೆ.