ಗುಜರಾತ್: ನೆನ್ನೆ ಸುರಿದ ಭಾರಿ ಗಾಳಿ ಮಳೆಗೆ ಗುಜರಾತ್‌ನ್ಲಲಿ ಪ್ರವಾಹ ಉಂಟಾಗಿದ್ದು, ಪ್ರವಾಹಕ್ಕೆ 8 ಮಂದಿ ಬಲಿಯಾಗಿದ್ದಾರೆ.ನೂರಕ್ಕೂ ಹೆಚ್ಚು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ದ್ವಾರಕ, ಬನಸ್ಕಂಠ, ಕುಚ್, ರಾಜ್ಕೋಟ್ ಜಿಲ್ಲೆಗಳಲ್ಲಿ ಜನರು ಮಹಿಳೆಯಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಕಮಿಷನರ್ ಅಶೋಕ್ ಪಾಂಡೆ ಮಾಹಿತಿ ನೀಡಿದ್ದಾರೆ.
ಕಳೆದ 24 ಗಂಟೆಯಲ್ಲಿ 8 ಮಂದಿ ಸಾವನಪ್ಪಿದ್ದು, ಗುಜರಾತ್ ಇದುವರೆಗೂ ಸಾವನಪ್ಪಿದವರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ.ಇನ್ನು ಸರ್ಕಾರ ಪ್ರವಾಹದ ಪರಿಸ್ಥಿತಿ ಮೇಲೆ ಮುನ್ನೆಚ್ಚರಿಕೆ ವಹಿಸಿದ್ದು ತುರ್ತು ಸಹಾಯಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನವಸರಿ, ದ್ವಾರಕಾ ಮತ್ತು ಬರೂಚ್ನಲ್ಲಿ ಪ್ರವಾಹಕ್ಕೆ ಸಿಲುಕಿದ್ದ 215 ಮಂದಿಯನ್ನು ರಕ್ಷಣೆ ಮಾಡಲಾಗಿದೆ. 826 ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ. ರಾಜ್ಯದಲ್ಲಿ ಸಿಗುವ 17 ರಾಜ್ಯ ಹೆದ್ದಾರಿಗಳು, 42 ರಸ್ತೆಗಳು ಹಾಗೂ 607 ಪಂಚಾಯತ್ ರಸ್ತೆಗಳು ಸೇರಿ ಒಟ್ಟು 666 ರಸ್ತೆಗಳಲ್ಲಿ ವಾಹನಗಳ ಸಂಚಾರ ಬಂದ್ ಆಗಿದೆ ಎಂದು ತಿಳಿಸಿದ್ದಾರೆ.

