ಮುಂಬೈ: ಅಧಿಕಾರ ದುರ್ಬಳಕೆ ಸೇರಿ ಹಲವು ವಿವಾದಗಳಿಂದ ಪ್ರೊಬೆಷನರಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ಸುದ್ದಿಯಲ್ಲಿದ್ದರೆ ಇದೀಗ ಅವರ ತಾಯಿ ಪಿಸ್ತೂಲ್ ಹಿಡಿದು ರೈತರನ್ನು ಬೆದರಿಸಿದ ಹಳೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೂಜಾ ಅವರ ತಂದೆ ದಿಲೀಪ್ ಖೇಡ್ಕರ್ ಹಾಗೂ ತಾಯಿ ಮನೋರಮಾ ಖೇಡ್ಕರ್ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪುಣೆಯ ಮುಲ್ಶಿ ತಹಸಿಲ್‌ನಲ್ಲಿ 25 ಎಕರೆ ಜಮೀನು ಖರೀದಿಸಿತ್ತು. ಈ ನಡುವೆ ಇದರ ಅಕ್ಕಪಕ್ಕದಲ್ಲಿರುವ ರೈತರ ಜಮೀನನ್ನು ಖೇಡ್ಕರ್ ಕುಟುಂಬ ಕಬಳಿಸಲು ಯತ್ನಿಸುತ್ತಿದೆ ಎಂದು ರೈತರು ಆರೋಪಿಸಿದ್ದರು ಈ ನಡುವೆ ಪೂಜಾ ಅವರ ತಾಯಿ ಮನೋರಮಾ ತನ್ನ ಬೌನ್ಸರ್ ಗಳ ಜೊತೆ ಜಮೀನಿಗೆ ಬಂದು ಕೈಯಲ್ಲಿ ಪಿಸ್ತೂಲ್ ಹಿಡಿದು ರೈತರನ್ನು ಗದರಿಸಿದ್ದಾರೆ ಇದರ ವಿಡಿಯೋ ಅಲ್ಲೇ ಇದ್ದ ರೈತರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಏಲ್ಲೆಡೆ ವೈರಲ್‌ ಆಗಿದೆ.

ರೈತರನ್ನು ಬೆದರಿಸಿದ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 323, 504, 506, 143, 144, 147, 148 ಮತ್ತು 149 ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.