ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್‌ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ದುರ್ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ ಹಾಗೂ ಇಬ್ಬರಿಗೆ ಗಂಭೀರವಾದ ಗಾಯಗಳಾಗಿವೆ.

ಮೃತರನ್ನು ಸ್ಟಾಕ್ಪಾ ನಿವಾಸಿ ಮೊಹಮ್ಮದ್ ಹುಸೇನ್ ಅವರ ಪುತ್ರ ಮೊಹಮ್ಮದ್ ಹಸನ್, ಚೋಸ್ಕೊರೆ ನಿವಾಸಿ ಎಕೆ ರಾಜಾ ಅವರ ಪುತ್ರ ಲಿಯಾಕತ್ ಅಲಿ, ಬದ್ಗಾಮ್ ನಿವಾಸಿ ಹಾಜಿ ಮೊಹಮ್ಮದ್ ಅವರ ಪುತ್ರ ಮೊಹಮ್ಮದ್ ಇಬ್ರಾಹಿಂ ಎಂದು ಗುರುತಿಸಲಾಗಿದೆ.

ಮಂಗಳವಾರ ಮಧ್ಯಾಹ್ನ 12:30ರ ಸುಮಾರಿಗೆ ಶಿಲಿಕ್ಚಯ್ ಟಿಸಿಪಿ ಬಳಿಯ ಶಿಲಿಕ್ಚಯ್ ಬೈಪಾಸ್‌ನಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಕಾರ್ಗಿಲ್‌ನಿಂದ ಡ್ರಾಸ್‌ಗೆ ತೆರಳುತ್ತಿದ್ದ ಸ್ಕಾರ್ಪಿಯೋ ವಾಹನವು ಟಿಪ್ಪರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳು ಆಳವಾದ ಕಂದಕಕ್ಕೆ ಬಿದ್ದಿದೆ.

ಬಸಿಜ್ ಇಮಾಮ್ (ಇಮಾಮ್ ಖೊಮೇನಿ ಮೆಮೋರಿಯಲ್ ಟ್ರಸ್ಟ್‌ನ ಕಲ್ಯಾಣ ಸಂಸ್ಥೆ), ಲಡಾಖ್ ಪೊಲೀಸರು ಮತ್ತು ಸೇನಾ ಸಿಬ್ಬಂದಿ ಸೇರಿದಂತೆ ಸ್ವಯಂಸೇವಕರು ಅಪಘಾತದ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.