ಹೈದರಾಬಾದ್:  ಜಾಗದ ವಿಷಯಕ್ಕೆ ಜಗಳ ನಡೆದು ಸ್ವಂತ ಅಕ್ಕನ ಮೇಲೆ ತಮ್ಮ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಗಾರ್ಲದಿನ್ನಿ ಮಂಡಲಂನ ಪೆನಕಚರ್ಲ ಗ್ರಾಮದಲ್ಲಿ ನಡೆದಿದೆ.

ಆಂಧ್ರದ ಪೆನಕಚರ್ಲ ಗ್ರಾಮದ ನಿವಾಸಿ ಮಹೆಬೂಬಿ ಎನ್ನುವರು ತಮ್ಮನಿಂದ ಹಲ್ಲೆಗೊಳಗಾದ ಮಹಿಳೆ. ಈಕೆಯ ಮಗಳ ಮೇಲೂ ದಾಳಿ ಮಾಡಲಾಗಿದೆ. ಕಿರಿಯ ಸಹೋದರ ಜಿಲಾನಿ ಬಾಷಾ ಹಲ್ಲೆ ಮಾಡಿದ ವ್ಯಕ್ತಿ.

ಮನೆಯ ಸ್ಥಳದ ವರ್ಗಾವಣೆ ವಿಚಾರವಾಗಿ ಅಕ್ಕ-ತಮ್ಮನ ನಡುವೆ ಕೆಲ ದಿನಗಳಿಂದ ಜಗಳ ನಡೆಯುತ್ತಿತ್ತು. ಆದರೆ ಇದರಿಂದ ಕುಪಿತಗೊಂಡ ಆರೋಪಿ ಏಕಾಏಕಿ ಅಕ್ಕನ ಮೇಲೆ ಕೊಡಲಿಯಿಂದ ಮಾರಣಾಂತಿಕವಾಗಿ ದಾಳಿ ಮಾಡಿದ್ದಾನೆ.

ದಾಳಿ ವೇಳೆ ತಪ್ಪಿಸಿಕೊಳ್ಳಲು ಹೋದರು ಆಕೆಯ ಕಾಲುಗಳನ್ನು ಕಡಿಯಲು ಹೋಗಿದ್ದಾನೆ. ಈ ವೇಳೆ ಬಲವಾದ ಪೆಟ್ಟುಗಳು ಮಹಿಳೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಮಹಿಳೆ ಹಾಗೂ ಆಕೆಯ ಮಗಳನ್ನು ಅನಂತಪುರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಜಿಲಾನಿ ಬಾಷಾನನ್ನು ಅರೆಸ್ಟ್ ಮಾಡಿದ್ದಾರೆ.

https://x.com/TeluguScribe/status/1810841322028421276?