ತಮಿಳುನಾಡು: ಸತ್ಯಮಂಗಲಂನಿಂದ ಕೊಯಮತ್ತೂರು ಮಾರ್ಗವಾಗಿ ಸಂಚರಿಸುವ ಹೆದ್ದಾರಿಯ ನೀಲಿಪಾಳ್ಯಂ ಬಳಿ ಮಾರ್ಚ್ 28ರಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಕುರಿಗಾಹಿಯೊಬ್ಬರು ರಸ್ತೆ ದಾಟುತ್ತಿದ್ದಾಗ, ಅವರ ಕುರಿಗಳು ಅಚಾನಕ್ ಆಗಿ ರಸ್ತೆಗೆ ಬಂದಿವೆ. ಇದನ್ನು ಗಮನಿಸಿದ ಮುಂಭಾಗದ ವಾಹನಗಳು ತಕ್ಷಣ ಬ್ರೇಕ್ ಹಾಕಿ ನಿಂತಿವೆ.

ಆದರೆ, ಇವುಗಳ ಹಿಂದೆಯೇ ಅತೀ ವೇಗವಾಗಿ ಬಂದ ತಮಿಳುನಾಡು ಸರ್ಕಾರಿ ಬಸ್ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಈ ಘಟನೆಯ ಸಿಸಿಟಿವಿ ದೃಶ್ಯಗಳು ಈಗ ವೈರಲ್ ಆಗುತ್ತಿದೆ.

View this post on Instagram

A post shared by News Karnataka (@newskarnataka)